ETV Bharat / bharat

2023ರಲ್ಲಿ ಹಿಂಸಾಚಾರಕ್ಕೂ ಮುನ್ನ ಮಣಿಪುರದಲ್ಲಿ 2,480 ಅಕ್ರಮ ವಲಸಿಗರು ಪತ್ತೆ: ಸಿಎಂ - MANIPUR VIOLENCE CASE - MANIPUR VIOLENCE CASE

2023ರಲ್ಲಿ ಹಿಂಸಾಚಾರಕ್ಕೂ ಮುನ್ನ ಮಣಿಪುರದಲ್ಲಿ 2,480 ಅಕ್ರಮ ವಲಸಿಗರು ಪತ್ತೆಯಾಗಿದ್ದರು ಎಂದು ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಹೇಳಿದ್ದಾರೆ.

ILLEGAL IMMIGRANTS  MANIPUR  OUTBREAK OF VIOLENCE
2023ರಲ್ಲಿ ಹಿಂಸಾಚಾರಕ್ಕೂ ಮುನ್ನ ಮಣಿಪುರದಲ್ಲಿ 2,480 ಅಕ್ರಮ ವಲಸಿಗರು ಪತ್ತೆ: ಸಿಎಂ (ಸಂಗ್ರಹ ಚಿತ್ರ (ETV Bharat))
author img

By PTI

Published : May 12, 2024, 5:25 PM IST

ಇಂಫಾಲ್ (ಮಣಿಪುರ): 2023 ರಲ್ಲಿ ರಾಜ್ಯ ಸಚಿವ ಸಂಪುಟದ ಉಪ ಸಮಿತಿಯು 2,480 ಅಕ್ರಮ ವಲಸಿಗರನ್ನು ಪತ್ತೆ ಮಾಡಿದೆ. ಆದರೆ ಕಳೆದ ವರ್ಷ ಮೇ 3 ರಂದು ಹಿಂಸಾಚಾರ ಭುಗಿಲೆದ್ದ ನಂತರ ಈ ಅಭಿಯಾನವನ್ನು ನಿಲ್ಲಿಸಲಾಯಿತು ಎಂದು ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಭಾನುವಾರ ಹೇಳಿದ್ದಾರೆ.

ಇಂದು ಮಾಧ್ಯಮಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಸಿಂಗ್, ಹೆಚ್ಚುತ್ತಿರುವ ಅರಣ್ಯನಾಶ ಮತ್ತು ಅಕ್ರಮ ವಲಸಿಗರಿಂದ ಹೊಸ ಗ್ರಾಮಗಳನ್ನು ಸ್ಥಾಪಿಸುವ ಬಗ್ಗೆ ಕಾಳಜಿವಹಿಸಿ, ಫೆಬ್ರವರಿ 2023 ರಲ್ಲಿ ಇಬ್ಬರು ಕುಕಿ ಮಂತ್ರಿಗಳಾದ ಲೆಟ್ಪಾವೊ ಹಾಕಿಪ್ ಮತ್ತು ನೆಮ್ಚಾ ಕಿಪ್ಜೆನ್ ಅವರು ಭಾಗವಹಿಸಿದ ಕ್ಯಾಬಿನೆಟ್ ಸಭೆಯ ನಂತರ ಕ್ಯಾಬಿನೆಟ್ ಉಪಸಮಿತಿಯನ್ನು ರಚಿಸಲಾಯಿತು. ಅಕ್ರಮ ವಲಸಿಗರನ್ನು ಗುರುತಿಸುವ ಉಪ ಸಮಿತಿಯ ಮುಖ್ಯಸ್ಥರನ್ನಾಗಿ ಹಾಕಿಪ್ ಅವರನ್ನು ನೇಮಿಸಲಾಯಿತು ಎಂದು ತಿಳಿಸಿದರು.

"ನಾವು ಯಾರ ವಿರುದ್ಧವೂ ಪಕ್ಷಪಾತ ಹೊಂದಿಲ್ಲ. ಆದರೆ ಅಕ್ರಮ ವಲಸಿಗರ ವಿರುದ್ಧ ಇದು ರಾಜ್ಯ ಕ್ಯಾಬಿನೆಟ್ ತೆಗೆದುಕೊಂಡ ನಿರ್ಧಾರ. ಬಯೋಮೆಟ್ರಿಕ್ಸ್ ಅನ್ನು ಚಾಂಡೆಲ್‌ನ ಹತ್ತು ಹಳ್ಳಿಗಳಲ್ಲಿ ತೆಗೆದುಕೊಳ್ಳಲಾಗಿದೆ. ಈ ಸಮಯದಲ್ಲಿ 1,165 ಅಕ್ರಮ ವಲಸಿಗರು ಕಂಡುಬಂದಿದ್ದಾರೆ. 1,147 ಅಕ್ರಮ ವಲಸಿಗರು ತೆಂಗ್ನೌಪಾಲ್ ಜಿಲ್ಲೆಯ 13 ಹಳ್ಳಿಗಳಲ್ಲಿ ಪತ್ತೆಯಾಗಿದ್ರೆ, 154 ಅಕ್ರಮ ವಲಸಿಗರು ಚುರಾಚಂದ್‌ಪುರದಲ್ಲಿ ಮತ್ತು ಉಳಿದವರು ಕಾಮ್‌ಜಾಂಗ್ ಜಿಲ್ಲೆಯಲ್ಲಿ ಕಂಡುಬಂದಿದ್ದಾರೆ" ಎಂದು ಸಿಎಂ ಸಿಂಗ್ ಹೇಳಿದರು.

ಕಾಮ್‌ಜಾಂಗ್ ಜಿಲ್ಲೆಗೆ ಪ್ರವೇಶಿಸಿದ ಹೆಚ್ಚುವರಿ 5,457 ಅಕ್ರಮ ವಲಸಿಗರನ್ನು ಈ ಅಂಕಿಅಂಶಗಳು ಒಳಗೊಂಡಿಲ್ಲ. ನೆರೆಯ ದೇಶದಲ್ಲಿ ಪರಿಸ್ಥಿತಿ ಸುಧಾರಿಸಿದ ನಂತರ 329 ಜನರು ಸ್ವಯಂಪ್ರೇರಣೆಯಿಂದ ಹಿಂತಿರುಗಿದ್ದಾರೆ ಮತ್ತು 5,173 ಜನರ ಬಯೋಮೆಟ್ರಿಕ್‌ಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸಿಂಗ್ ಹೇಳಿದರು.

"ಅಕ್ರಮ ವಲಸಿಗರ ಪತ್ತೆಯು ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಆದರೆ ಇಡೀ ಮಣಿಪುರ ರಾಜ್ಯವನ್ನು ಆವರಿಸಿತ್ತು. ಹಳ್ಳಿಗಳಿಗೆ ಭೇಟಿ ನೀಡಿದ ನಂತರ ಅವರು ಕಂಡುಬಂದಿದ್ದಾರೆ. ಅಕ್ರಮ ವಲಸಿಗರನ್ನು ಗುರುತಿಸುವ ಅಭಿಯಾನವು ಪ್ರಾರಂಭವಾದ ಒಂದು ತಿಂಗಳ ನಂತರ ಮೊಟಕುಗೊಂಡಿತು ಮತ್ತು ಕಳೆದ ವರ್ಷ ಮೇ 3 ರಂದು ಹಿಂಸಾಚಾರ ಭುಗಿಲೆದ್ದ ನಂತರ ಅದನ್ನು ನಿಲ್ಲಿಸಬೇಕಾಯಿತು" ಎಂದು ಸಿಂಗ್ ಹೇಳಿದರು.

ಪರಿಶಿಷ್ಟ ಪಂಗಡ (ಎಸ್‌ಟಿ) ಸ್ಥಾನಮಾನಕ್ಕಾಗಿ ಮೈತೈ ಸಮುದಾಯದ ಬೇಡಿಕೆಯ ವಿರುದ್ಧ ಪ್ರತಿಭಟಿಸಲು ಬೆಟ್ಟದ ಜಿಲ್ಲೆಗಳಲ್ಲಿ 'ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ' ಆಯೋಜಿಸಿದಾಗ ಕಳೆದ ವರ್ಷ ಮೇ 3 ರಂದು ಜನಾಂಗೀಯ ಘರ್ಷಣೆಗಳು ಭುಗಿಲೆದ್ದವು. ಈ ಘರ್ಷಣೆಯಲ್ಲಿ 219 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು ಮತ್ತು ಸಾವಿರಾರು ಜನರು ಮನೆಗಳಿಂದ ಸ್ಥಳಾಂತರಗೊಂಡರು.

ಮಣಿಪುರದ ಜನಸಂಖ್ಯೆಯ ಶೇಕಡ 53 ರಷ್ಟಿರುವ ಮೈತೈಗಳು ಇಂಫಾಲ್ ಕಣಿವೆಯಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಬುಡಕಟ್ಟು ಜನಾಂಗದ ನಾಗಾಗಳು ಮತ್ತು ಕುಕಿಗಳು 40 ಪ್ರತಿಶತಕ್ಕಿಂತ ಸ್ವಲ್ಪ ಹೆಚ್ಚು ಮತ್ತು ಬೆಟ್ಟದ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ.

ಓದಿ: 5 ಲಕ್ಷ ಅಕ್ರಮ ವಲಸಿಗರನ್ನು ಹೊರಹಾಕಿದ ಪಾಕಿಸ್ತಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.