ETV Bharat / bharat

20 ಭಾರತೀಯರ ಮೀನುಗಾರರ ಬಿಡುಗಡೆ ಮಾಡಿದ ಶ್ರೀಲಂಕಾ; ಹೊಸ ವರ್ಷದಂದು ಚೆನ್ನೈಗೆ ಆಗಮನ - INDIAN FISHERMEN RELEASED

ವರ್ಷದ ಹಿಂದೆ ಸಾಗರ ಗಡಿ ದಾಟಿದ ಈ ಮೀನುಗಾರರನ್ನು ಶ್ರೀಲಂಕಾ ನೌಕಾ ಸೇನೆ ಬಂಧಿಸಿತ್ತು. ಇವರೆಲ್ಲ ತಮಿಳುನಾಡಿನ ಪುದುಕೊಟ್ಟೈ, ರಾಮನಾಥಪುರಂ ಮತ್ತು ಟ್ಯುಟಿಕೋರಿನ್​ ಮೂಲದವರಾಗಿದ್ದರು.

20-indian-fishermen-released-by-sri-lanka-return-home
ಸಾಂದರ್ಭಿಕ ಚಿತ್ರ (IANS)
author img

By ETV Bharat Karnataka Team

Published : Jan 1, 2025, 12:28 PM IST

ಚೆನ್ನೈ (ತಮಿಳುನಾಡು): ಜೈಲಿನಲ್ಲಿದ್ದ 20 ಭಾರತೀಯ ಮೀನುಗಾರರನ್ನು ಶ್ರೀಲಂಕಾ ಸರ್ಕಾರ ಬಿಡುಗಡೆ ಮಾಡಿದ್ದು, ಅವರು ಹೊಸ ವರ್ಷದಂದೇ ವಿಮಾನದ ಮೂಲಕ ಚೆನ್ನೈಗೆ ಬಂದಿಳಿದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವರ್ಷದ ಹಿಂದೆ ಸಾಗರ ಗಡಿ ದಾಟಿದ ಈ ಮೀನುಗಾರರನ್ನು ಶ್ರೀಲಂಕಾ ನೌಕಾ ಸೇನೆ ಬಂಧಿಸಿತ್ತು. ಇವರೆಲ್ಲ ತಮಿಳುನಾಡಿನ ಪುದುಕೊಟ್ಟೈ, ರಾಮನಾಥಪುರಂ ಮತ್ತು ಟ್ಯುಟಿಕೋರಿನ್​ ಮೂಲದವರಾಗಿದ್ದು, ಶ್ರೀಲಂಕಾದಲ್ಲಿ ನ್ಯಾಯಾಲಯ ಬಂಧನದಲ್ಲಿದ್ದರು.

ಭಾರತ ಮತ್ತು ಶ್ರೀಲಂಕಾ ಸರ್ಕಾರದ ಮಾತುಕತೆ ಬಳಿಕ 20 ಮೀನುಗಾರರನ್ನು ಬಿಡುಗಡೆ ಮಾಡಲು ದ್ವೀಪ ರಾಷ್ಟ್ರ ಒಪ್ಪಿತು. ಅವರನ್ನೆಲ್ಲಾ ಶ್ರೀಲಂಕಾದಲ್ಲಿನ ಭಾರತೀಯ ರಾಯಭಾರಿ ಕಚೇರಿಗೆ ಒಪ್ಪಿಸಲಾಯಿತು. ಬಳಿಕ ಅವರಿಗೆ ತಾತ್ಕಾಲಿಕ ನಾಗರಿಕ ಪ್ರಮಾಣಪತ್ರವನ್ನು ನೀಡಲಾಯಿತು. ಬಳಿಕ ಬುಧವಾರ ಅವರು ಕೊಲೊಂಬೊದಿಂದ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದಿರು.

ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಇವರನ್ನೆಲ್ಲಾ ನಾಗರಿಕ ಪ್ರಮಾಣಪತ್ರ ಪರಿಶೀಲನೆ, ಕಸ್ಟಮ್ಸ್​ ಪರೀಕ್ಷೆ ಮತ್ತು ಇತರೆ ಔಪಚಾರಿಕ ಪರೀಕ್ಷೆಗೆ ಒಳಪಡಿಸಿ ಬಿಡುಗಡೆ ಮಾಡಲಾಯಿತು.

ಚೆನ್ನೈಗೆ ಬಂದಿಳಿದ ಅವರಿಗೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಶುಭಾಶಯ ಕೋರಿದರು. ಬಳಿಕ ಅವರನ್ನು ಪ್ರತ್ಯೇಕ ವಾಹನಗಳಲ್ಲಿ ಅವರವರ ಮನೆಗೆ ತಲುಪುವ ವ್ಯವಸ್ಥೆ ಮಾಡಿದರು.

ಕರಾವಳಿ ಜಿಲ್ಲೆಗಳಲ್ಲಿ ರಾಜ್ಯದ ಮೀನುಗಾರರ ನಿಯಮಿತ ಬಂಧನ ಖಂಡಿಸಿ, ತಮಿಳುನಾಡಿನಾದ್ಯಂತ ಮೀನುಗಾರರ ಸಂಸ್ಥೆಗಳು ರಾಜ್ಯದಾದ್ಯಂತ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿದ್ದವು. ಅಲ್ಲದೆ ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಸಾಗರ ಮಧ್ಯೆ ಬಂಧನ ಮತ್ತು ಬೋಟ್​ಗಳನ್ನು ವಶಕ್ಕೆ ಪಡೆಯುತ್ತಿರುವ ಕುರಿತು ಮಧ್ಯ ಪ್ರವೇಶಿಸಬೇಕು. ಮೀನುಗಾರಿಕೆ ನಮ್ಮ ಜೀವನೋಪಾಯವಾಗಿದ್ದು, ಇದಕ್ಕೆ ಪರಿಹಾರ ಹುಡುಕುವಲ್ಲಿ ಮುಂದಾಗುವಂತೆ ಮನವಿ ಸಲ್ಲಿಸಿದ್ದರು.

ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದ ಶ್ರೀಲಂಕಾ ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಜೊತೆ ಕೂಡ ವಿದೇಶಾಂಗ ಸಚಿವರಾದ ಎಸ್​ ಜೈಶಂಕರ್​​ ತಮಿಳುನಾಡು ಮೀನುಗಾರರ ಬಂಧನದ ವಿಚಾರ ಚರ್ಚಿಸಿದ್ದರು.

ಕೇಂದ್ರದ ಪ್ರಬಲ ಮಧ್ಯಸ್ಥಿಕೆಯಿಂದ ಭವಿಷ್ಯದಲ್ಲಿ ಮೀನುಗಾರರ ಬಂಧನ ತಪ್ಪಿಸಬಹುದು ಎಂದು ಪಿಎಂಕೆ ಅಧ್ಯಕ್ಷ ಮತ್ತು ಮಾಜಿ ಕೇಂದ್ರ ಸಚಿವ ಅನ್ಬುಮಣಿ ರಾಮದಾಸ್​​ ತಿಳಿಸಿದ್ದರು.

ಶ್ರೀಲಂಕಾದ ವಶದಲ್ಲಿ ತಮಿಳುನಾಡಿನ 504 ಭಾರತೀಯ ಮೀನುಗಾರರಿದ್ದಾರೆ. ಹಾಗೂ ಸುಮಾರು 48 ಯಂತ್ರಚಾಲಿತ ಮೀನುಗಾರಿಕೆ ಬೋಟ್​​ಗಳು ಇವೆ ಎಂದು ತಿಳಿದು ಬಂದಿದೆ. (ಐಎಎನ್​ಎಸ್​)

ಇದನ್ನೂ ಓದಿ: 'ಮಗಳ ಜೀವ ಉಳಿಸಲು ಸಹಾಯ ಮಾಡಿ, ಪ್ಲೀಸ್': ಮರಣದಂಡನೆ ಶಿಕ್ಷೆಗೊಳಗಾದ ಪ್ರಿಯಾ ತಾಯಿಯ ಮೊರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.