ETV Bharat / bharat

ಛತ್ತೀಸ್‌ಗಢದಲ್ಲಿ ನಕ್ಸಲರಿಂದ ಐಇಡಿ ಸ್ಫೋಟ: ಇಬ್ಬರು ಯೋಧರು ಹುತಾತ್ಮ, ಗಾಯಾಳುಗಳ ಏರ್‌ಲಿಫ್ಟ್​ - Naxal IED Blast

author img

By PTI

Published : Jul 18, 2024, 11:11 AM IST

ಛತ್ತೀಸ್‌ಗಢದ ವಿಜಾಪುರ ಜಿಲ್ಲೆಯಲ್ಲಿ ನಕ್ಸಲರು ಐಇಡಿ ಸ್ಫೋಟಿಸಿದ್ದು, ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಗಾಯಗೊಂಡ ಇತರ ನಾಲ್ವರನ್ನು ಹೆಚ್ಚಿನ ಚಿಕಿತ್ಸೆಗೆ ರಾಯ್‌ಪುರಕ್ಕೆ ಏರ್‌ಲಿಫ್ಟ್​ ಮಾಡಲಾಗಿದೆ.

ಛತ್ತೀಸ್‌ಗಢದಲ್ಲಿ ಐಇಡಿ ಸ್ಫೋಟದಿಂದ ಇಬ್ಬರು ಯೋಧರು ಹುತಾತ್ಮ
ಛತ್ತೀಸ್‌ಗಢದಲ್ಲಿ ಐಇಡಿ ಸ್ಫೋಟದಿಂದ ಇಬ್ಬರು ಯೋಧರು ಹುತಾತ್ಮ (ETV Bharat)

ಬಿಜಾಪುರ(ಛತ್ತೀಸ್‌ಗಢ): ನಕ್ಸಲರು ಅಡಗಿಸಿಟ್ಟಿದ್ದ ಐಇಡಿ (ಸುಧಾರಿತ ಸ್ಫೋಟಕ ಸಾಧನ) ಸ್ಫೋಟಗೊಂಡು ಇಬ್ಬರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿ, ಇತರ ನಾಲ್ವರು ಗಾಯಗೊಂಡಿರುವ ಘಟನೆ ಛತ್ತೀಸ್‌ಗಢದ ವಿಜಾಪುರ ಜಿಲ್ಲೆಯಲ್ಲಿ ಬುಧವಾರ ರಾತ್ರಿ ನಡೆದಿದೆ. ಮೃತರನ್ನು ವಿಶೇಷ ಕಾರ್ಯಪಡೆಯ (ಎಸ್‌ಟಿಎಫ್) ಭರತ್ ಸಾಹು ಹಾಗೂ ಸತ್ಯರ್ ಸಿಂಗ್ ಕಾಂಗೆ ಎಂದು ಗುರುತಿಸಲಾಗಿದೆ.

ದರ್ಭಾ ಮತ್ತು ಪಶ್ಚಿಮ ಬಸ್ತಾರ್ ವಿಭಾಗದಲ್ಲಿ ನಕ್ಸಲೈಟ್‌ಗಳ ಉಪಸ್ಥಿತಿಯ ಕುರಿತು ದೊರೆತ ಮಾಹಿತಿಯ ಮೇರೆಗೆ ಭದ್ರತಾ ಸಿಬ್ಬಂದಿ ಮಂಗಳವಾರ ಕಾರ್ಯಾಚರಣೆಗೆ ಇಳಿದಿದ್ದರು. ರಾಜ್ಯ ಪೊಲೀಸ್‌ ಇಲಾಖೆಯ ಎಸ್‌ಟಿಎಫ್, ಜಿಲ್ಲಾ ಮೀಸಲು ಪಡೆಗೆ ಹಾಗೂ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮತ್ತು ಕೋಬ್ರಾ ಕಮಾಂಡ್​ಗಳು ಜಂಟಿ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಬುಧವಾರ ರಾತ್ರಿ ಕಾರ್ಯಾಚರಣೆ ಮುಗಿಸಿ ಹಿಂದಿರುಗುತ್ತಿದ್ದಾಗ ಬಿಜಾಪುರ-ಸುಕ್ಮಾ-ದಂತೇವಾಡ ಜಿಲ್ಲೆಗಳ ಜಂಕ್ಷನ್‌ನಲ್ಲಿರುವ ಅರಣ್ಯದ ತಾರೆಮ್ ಪ್ರದೇಶದಲ್ಲಿ ನಕ್ಸಲರು ಐಇಡಿ ಸ್ಫೋಟಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಐಇಡಿ ಸ್ಫೋಟದ ಪರಿಣಾಮ ಎಸ್‌ಟಿಎಫ್ ಕಾನ್‌ಸ್ಟೇಬಲ್‌ಗಳಾದ ರಾಯ್‌ಪುರದ ನಿವಾಸಿ ಭರತ್ ಸಾಹು ಮತ್ತು ನಾರಾಯಣಪುರ ಜಿಲ್ಲೆಯ ಸತ್ಯರ್ ಸಿಂಗ್ ಕಾಂಗೆ ಮೃತಪಟ್ಟಿದ್ದಾರೆ. ಇತರ ನಾಲ್ವರು ಸಿಬ್ಬಂದಿ ಗಾಯಗೊಂಡಿದ್ದಾರೆ. ಇವರ ಸ್ಥಿತಿ ಚಿಂತಾಜನಕವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ರಾಯ್‌ಪುರಕ್ಕೆ ಹೆಲಿಕಾಪ್ಟರ್​ನಲ್ಲಿ ಸ್ಥಳಾಂತರಿಸಲಾಗಿದೆ'' ಎಂದು ಬಸ್ತರ್ ಐಜಿ ಸುಂದರರಾಜ್ ಪಿ. ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ 12 ನಕ್ಸಲೀಯರು ಹತ; ಪೊಲೀಸ್​ ತಂಡಕ್ಕೆ ₹51 ಲಕ್ಷ ಬಹುಮಾನ ಘೋಷಿಸಿದ ಸರ್ಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.