ETV Bharat / bharat

ಮಾವಿನಹಣ್ಣಿನ ಬೀಜದಿಂದ ತಯಾರಿಸಿದ ಆಹಾರ ಸೇವಿಸಿ ಇಬ್ಬರು ಸಾವು, 6 ಮಂದಿ ಸ್ಥಿತಿ ಗಂಭೀರ

ಒಡಿಶಾದಲ್ಲಿ ಮಾವಿನಹಣ್ಣಿ ಬೀಜದಿಂದ ಸ್ಥಳೀಯವಾಗಿ ತಯಾರಿಸುವ ಆಹಾರ ಪದಾರ್ಥ ಸೇವಿಸಿದ ಎಂಟು ಮಂದಿಯಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : 3 hours ago

ಫುಲ್ಬಲಿ (ಕಂಧಮಾಲ್, ಒಡಿಶಾ): ಮಾವಿನಹಣ್ಣಿನ ಬೀಜಗಳಿಂದ ತಯಾರಿಸಿದ ಆಹಾರ ಪದಾರ್ಥವನ್ನು ಸೇವಿಸಿದ ಇಬ್ಬರು ಸಾವನ್ನಪ್ಪಿ 6 ಮಂದಿ ತೀವ್ರವಾಗಿ ಅಸ್ವಸ್ಥರಾಗಿರುವ ಘಟನೆ ಬಾಲಿಗುಡ ಉಪವಿಭಾಗದ ದರಿಂಗ್‌ಬಾಡಿ ಬ್ಲಾಕ್‌ನ ಗಡಾಪುರ ಪಂಚಾಯತ್‌ನ ಮಂಡಿಪಂಕ ಗ್ರಾಮದಲ್ಲಿ ಗುರುವಾರ ನಡೆದಿದೆ.

ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಎಲ್ಲ ಗಂಭೀರವಾವಾಗಿ ಅಸ್ವಸ್ಥರಾದವರನ್ನು ಬ್ರಹ್ಮಪುರ ಆಸ್ಪತ್ರೆಗೆ ಸಾಗಿಸಲಾಗಿದೆ. ಮೃತಪಟ್ಟವರು ಇಬ್ಬರು ಮಹಿಳೆಯರು ಎಂದು ತಿಳಿದು ಬಂದಿದೆ.

ಮಾಹಿತಿ ಪ್ರಕಾರ, ಮೃತರು ಹಾಗೂ ಅಸ್ವಸ್ಥರು ಮಾವಿನ ಬೀಜದಿಂದ ತಯಾರಿಸಿದ ಸ್ಥಳೀಯ ಆಹಾರ ಪದಾರ್ಥವನ್ನು ಸೇವಿಸಿದ್ದಾರೆ. ಸೇವಿಸಿದ ಸ್ವಲ್ಪ ಸಮಯದ ನಂತರ ಅವರೆಲ್ಲರೂ ಇದ್ದಕ್ಕಿದ್ದಂತೆ ಅಸ್ವಸ್ಥರಾಗಿದ್ದಾರೆ. ವಿಷಯ ತಿಳಿದ ಗ್ರಾಮಸ್ಥರು ತಕ್ಷಣ ಅವರನ್ನು ಮೊದಲು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಸ್ಥಿತಿ ಗಂಭೀರವಾಗಿದ್ದರಿಂದ 6 ಮಂದಿಯನ್ನು ಬ್ರಹ್ಮಪುರಕ್ಕೆ ಸ್ಥಳಾಂತರಿಸಲಾಗಿದೆ. ಒಬ್ಬ ಮಹಿಳೆ ಆರೋಗ್ಯ ಕೇಂದ್ರದಲ್ಲಿ ಸಾವನ್ನಪ್ಪಿದರೆ, ಇನ್ನೊಬ್ಬ ಮಹಿಳೆ ಆಂಬ್ಯುಲೆನ್ಸ್‌ನಲ್ಲಿ ಬ್ರಹ್ಮಪುರಕ್ಕೆ ಸ್ಥಳಾಂತರಿಸುವಾಗ ದಾರಿಮಧ್ಯೆ ಸಾವನ್ನಪ್ಪಿದ್ದಾರೆ. ಸ್ಥಳೀಯ ಪೊಲೀಸರು ಮತ್ತು ಆಡಳಿತ ಈ ಬಗ್ಗೆ ತನಿಖೆ ಪ್ರಾರಂಭಿಸಿದೆ.

ಇದನ್ನೂ ಓದಿ: ಚಿಕ್ಕಮಗಳೂರು: ದೇವರ ದರ್ಶನಕ್ಕೆ ತೆರಳುತ್ತಿದ್ದ ದಂಪತಿ ಕಾರು ಅಪಘಾತ, ಮಹಿಳೆ ಸ್ಥಳದಲ್ಲೇ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.