ETV Bharat / bharat

ವಿವಿಧ ಜೈಲುಗಳಲ್ಲಿ ಗರ್ಭಿಣಿಯರಾಗಿ 196 ಶಿಶುಗಳಿಗೆ ಜನ್ಮಕೊಟ್ಟ ಕೈದಿಗಳು: ಕೋಲ್ಕತ್ತಾ ಹೈಕೋರ್ಟ್ ಆತಂಕ - ಕೋಲ್ಕತ್ತಾ ಹೈಕೋರ್ಟ್

ಪಶ್ಚಿಮ ಬಂಗಾಳ ರಾಜ್ಯದ ವಿವಿಧ ಜೈಲುಗಳಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ನಂತರ ಗರ್ಭಿಣಿಯರಾದ ಕೈದಿಗಳು 196 ಶಿಶುಗಳಿಗೆ ಜನ್ಮ ನೀಡಿದ್ದಾರೆ. ಈ ಮಾಹಿತಿ ತಿಳಿದ ಕೋಲ್ಕತ್ತಾ ಹೈಕೋರ್ಟ್ ತೀವ್ರ ಆತಂಕ ವ್ಯಕ್ತಪಡಿಸಿದೆ.

Etv Bharat
Etv Bharat
author img

By ETV Bharat Karnataka Team

Published : Feb 9, 2024, 7:45 AM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳ ರಾಜ್ಯ ವಿವಿಧ ಜೈಲುಗಳಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ಗರ್ಭಿಣಿಯಾಗಿದ್ದ ಕೈದಿಗಳು 196 ಶಿಶುಗಳಿಗೆ ಜನ್ಮ ಕೊಟ್ಟಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸಲು ತಡೆಗಟ್ಟುವ ಕ್ರಮವಹಿಸಬೇಕು. ಮಹಿಳಾ ಕೈದಿಗಳು ಇರುವ ಆವರಣಗಳಿಗೆ ಪುರುಷ ಉದ್ಯೋಗಿಗಳು ಪ್ರವೇಶಿಸುವುದನ್ನು ನಿಷೇಧಿಸಬೇಕು ಎಂದು ಅಮಿಕಸ್ ಕ್ಯೂರಿ ಕೋಲ್ಕತ್ತಾ ಹೈಕೋರ್ಟ್​ ಎದುರು ಪ್ರಸ್ತಾಪಿಸಿದ್ದಾರೆ.

ಪಶ್ಚಿಮ ಬಂಗಾಳದ ಜೈಲುಗಳಲ್ಲಿ ಮಹಿಳಾ ಕೈದಿಗಳ ಸ್ಥಿತಿಗತಿಗಳ ಬಗ್ಗೆ ಕೋಲ್ಕತ್ತಾ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಕಸ್ಟಡಿಯಲ್ಲಿದ್ದಾಗ ಮಹಿಳಾ ಕೈದಿಗಳು ಗರ್ಭಿಣಿಯಾಗುವ ಆತಂಕಕಾರಿ ವಿಷಯದ ಬಗ್ಗೆ ಅಮಿಕಸ್ ಕ್ಯೂರಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದು, ರಾಜ್ಯಾದ್ಯಂತ ವಿವಿಧ ಕಾರಾಗೃಹಗಳಲ್ಲಿ ಅಂದಾಜು 196 ಶಿಶುಗಳು ಜನಿಸಿರುವುದಾಗಿ ವರದಿಯಾಗಿದೆ.

ಪಶ್ಚಿಮ ಬಂಗಾಳದ ಜೈಲು ಸುಧಾರಣೆಗಳು ಮತ್ತು ಸುಧಾರಣಾ ಮನೆಗಳಿಗೆ (ಕಾರಗೃಹ) ಸಂಬಂಧಿಸಿದ ಪ್ರಕರಣವನ್ನು ಉಲ್ಲೇಖಿಸಿ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ. ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಶಿವಜ್ಞಾನಂ ಮತ್ತು ನ್ಯಾಯಮೂರ್ತಿ ಸುಪ್ರತಿಮ್ ಭಟ್ಟಾಚಾರ್ಯ ಅವರು, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕ್ರಿಮಿನಲ್ ಪ್ರಕರಣಗಳಲ್ಲಿ ಪರಿಣತಿ ಹೊಂದಿರುವ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ನಿಗದಿಪಡಿಸಿದರು. ಕೋಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ ಜಯಮಲ್ಯ ಬಾಗ್ಚಿ ಅವರ ಪೀಠದಲ್ಲಿ ಬಹುಶಃ ಈ ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.

ಸುಪ್ರೀಂ ಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಆರ್‌ಸಿ ಲಹೋಟಿ ಅವರು ಪತ್ರ ಬರೆಯುವ ಮೂಲಕ ದೇಶದ ವಿವಿಧ ಸುಧಾರಣಾ ಸೌಲಭ್ಯಗಳಲ್ಲಿ ಕೈದಿಗಳ ಅಮಾನವೀಯ ಸ್ಥಿತಿಗಳ ಬಗ್ಗೆ ಸುಪ್ರೀಂ ಕೋರ್ಟ್‌ನ ಗಮನ ಸೆಳೆದಿದ್ದಾರೆ. ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿ ಕೆಲವು ನಿರ್ದೇಶನಗಳನ್ನು ನೀಡಿತು. ಆ ಆದೇಶವನ್ನು ದೇಶದ ಎಲ್ಲ ಹೈಕೋರ್ಟ್‌ಗಳಿಗೆ ಕಳುಹಿಸಲಾಗಿದೆ. ಏಕೆಂದರೆ ವಿಷಯ ರಾಜ್ಯಕ್ಕೆ ಸೇರಿದ್ದು. ಸ್ವಯಂ ಪ್ರೇರಿತ ಪ್ರಕರಣಗಳನ್ನು ದಾಖಲಿಸುವ ಮೂಲಕ ಕಾರಾಗೃಹ ಸುಧಾರಣಾ ಸೌಲಭ್ಯಗಳು ಮತ್ತು ಕೈದಿಗಳಿಗೆ ನೀಡಲಾಗುವ ಇತರ ಸೌಲಭ್ಯಗಳ ಕುರಿತು ಪರಿಶೀಲಿಸಲು ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳಿಗೆ ಸೂಚಿಸಲಾಯಿತು. ರಾಜ್ಯ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳು ಪ್ರಕರಣವನ್ನು ಕೈಗೆತ್ತಿಕೊಂಡು ಒಬ್ಬರನ್ನು ಅಮಿಕಸ್ ಕ್ಯೂರಿಯಾಗಿ ನೇಮಕ ಮಾಡಿದ್ದರು.

ಅಮಿಕಸ್ ಕ್ಯೂರಿ ಸಿದ್ಧಪಡಿಸಿದ ವರದಿದಲ್ಲೇನಿದೆ?: ಅಮಿಕಸ್ ಕ್ಯೂರಿ ಅವರು, ರಾಜ್ಯದ ವಿವಿಧ ಸುಧಾರಣಾ ಕೇಂದ್ರಗಳಲ್ಲಿ 196 ಮಹಿಳೆಯರು ಕಾಮತೃಷೆಗೆ ಬಲಿಯಾಗಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸಲು ತಡೆಗಟ್ಟುವ ಕ್ರಮವಹಿಸುವಂತೆ ತಿಳಿಸಿದರು. ಮಹಿಳಾ ಕೈದಿಗಳನ್ನು ಹೊಂದಿರುವ ಆವರಣಗಳಿಗೆ ಪುರುಷ ಉದ್ಯೋಗಿಗಳು ಪ್ರವೇಶಿಸುವುದನ್ನು ನಿಷೇಧಿಸುವಂತೆ ವರದಿಯಲ್ಲಿ ಪ್ರಸ್ತಾಪ ಮಾಡಿದ್ದಾರೆ.

ಇದಲ್ಲದೇ, ಅಮಿಕಸ್ ಕ್ಯೂರಿಯು ಪರಿಸ್ಥಿತಿಗಳನ್ನು ಸುಧಾರಿಸುವ ಮತ್ತು ತಿದ್ದುಪಡಿ ಮಾಡುವ ಸೌಲಭ್ಯಗಳಲ್ಲಿ ಕೈದಿಗಳ ಕಲ್ಯಾಣವನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿರುವ ಜನವರಿ 25ರ ವರದಿಯಲ್ಲಿ ವಿವರಿಸಿರುವ ಹೆಚ್ಚುವರಿ ಸಲಹೆಗಳನ್ನು ಪ್ರಸ್ತುತಪಡಿಸಿದ್ದಾರೆ. ಅಮಿಕಸ್ ಕ್ಯೂರಿ ನೀಡಿದ ಮತ್ತೊಂದು ಸಲಹೆ ಎಂದರೆ, ಎಲ್ಲ ಜಿಲ್ಲಾ ನ್ಯಾಯಾಧೀಶರು (ಅವರು ಸಂದರ್ಶಕರ ಮಂಡಳಿಯ ಅಧ್ಯಕ್ಷರಾಗಿರುವುದರಿಂದ) ಸುಧಾರಣಾ ಮನೆಗಳಲ್ಲಿ ತಂಗಿದ್ದ ಸಮಯದಲ್ಲಿ ಎಷ್ಟು ಮಹಿಳಾ ಕೈದಿಗಳು ಗರ್ಭಿಣಿಯಾಗಿದ್ದಾರೆ ಎಂಬುದನ್ನು ಕಂಡು ಹಿಡಿಯಲು ತಮ್ಮ ವ್ಯಾಪ್ತಿಯಲ್ಲಿರುವ ಸುಧಾರಣಾ ಮನೆಗಳಿಗೆ (ಕಾರಾಗೃಹ) ಭೇಟಿ ನೀಡಬೇಕು ಎಂದು ಸಲಹೆ ನೀಡಿದ್ದಾರೆ.

ಅಲ್ಲದೇ, ಎಲ್ಲಾ ಮಹಿಳಾ ಕೈದಿಗಳನ್ನು ಸುಧಾರಣಾ ಮನೆಗಳಿಗೆ ಕಳುಹಿಸುವ ಮೊದಲು, ಅವರ ಲೈಂಗಿಕ ಶೋಷಣೆಯನ್ನು ತಡೆಗಟ್ಟಲು ಗರ್ಭಧಾರಣೆಯ ಪರೀಕ್ಷೆಯನ್ನು ನಡೆಸಲು ಎಲ್ಲ ಜಿಲ್ಲೆಗಳ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಬಹುದು. ಈ ಪರಿಣಾಮಕ್ಕಾಗಿ ಗರ್ಭಧಾರಣೆಯ ಪರೀಕ್ಷೆಗಳನ್ನು ಪಶ್ಚಿಮ ಬಂಗಾಳದ ಎಲ್ಲ ಪೊಲೀಸ್ ಠಾಣೆಗಳು ಮಾಡಬೇಕು. ಈ ನಿಟ್ಟಿನಲ್ಲಿ ಈ ಗೌರವಾನ್ವಿತ ನ್ಯಾಯಾಲಯವು ಅಗತ್ಯ ಆದೇಶಗಳನ್ನು/ ನಿರ್ದೇಶನಗಳನ್ನು ನೀಡಬಹುದು ಎಂದು ಅಮಿಕಸ್ ಕ್ಯೂರಿ ಸಿದ್ಧಪಡಿಸಿದ ವರದಿಯಲ್ಲಿ ತಿಳಿಸಲಾಗಿದೆ.

ವಿಚಾರಣೆಯ ಸಮಯದಲ್ಲಿ, ಅಮಿಕಸ್ ಕ್ಯೂರಿಯು ಭೇಟಿ ನೀಡಿದ ಜೈಲಿನಲ್ಲಿರುವ ಗರ್ಭಿಣಿಯರನ್ನು ಮತ್ತು 15 ಮಕ್ಕಳ ವೀಕ್ಷಣೆ ಮಾಡಿರುವ ಬಗ್ಗೆ ವಿವರಿಸಿದರು, ಪಶ್ಚಿಮ ಬಂಗಾಳದಲ್ಲಿ ಸೆರೆವಾಸದಲ್ಲಿರುವ ಮಹಿಳೆಯರು ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸುವ ತುರ್ತುಸ್ಥಿತಿಯನ್ನು ಒತ್ತಿ ಹೇಳಿದರು.

ಈ ವಿಷಯವು ವ್ಯಾಪಕವಾದ ಕಾಳಜಿಯನ್ನು ಹುಟ್ಟುಹಾಕಿದೆ ಮತ್ತು ಮಹಿಳಾ ಕೈದಿಗಳ ಹಕ್ಕುಗಳು ಮತ್ತು ಯೋಗಕ್ಷೇಮವನ್ನು ಕಾಪಾಡಲು ಸಮಗ್ರ ಸುಧಾರಣೆಗಳಿಗೆ ಕರೆ ನೀಡಿದೆ. ವಿಭಾಗೀಯ ಪೀಠದ ಮುಂದೆ ಮುಂಬರುವ ವಿಚಾರಣೆಯು ಈ ನಿರ್ಣಾಯಕ ಸಮಸ್ಯೆಗಳನ್ನು ಆಳವಾಗಿ ಅಧ್ಯಯನ ಮಾಡಲು ಮತ್ತು ಎಲ್ಲ ಕೈದಿಗಳಿಗೆ ನ್ಯಾಯ ಮತ್ತು ಘನತೆಯನ್ನು ಖಚಿತಪಡಿಸಿಕೊಳ್ಳಲು ಪರಿಣಾಮಕಾರಿ ಕ್ರಮಗಳನ್ನು ಅನ್ವೇಷಿಸಲು ಭರವಸೆ ಕೊಟ್ಟಿದೆ. ಸೋಮವಾರ ಕೋಲ್ಕತ್ತಾ ಹೈಕೋರ್ಟ್‌ನಲ್ಲಿ ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.

ಇದನ್ನೂ ಓದಿ: ಫೇಸ್‌ಬುಕ್ ಲೈವ್‌ನಲ್ಲೇ ಉದ್ಧವ್ ಠಾಕ್ರೆ ಗುಂಪಿನ ಮುಖಂಡನನ್ನು ಗುಂಡಿಕ್ಕಿ ಹತ್ಯೆ: ಆರೋಪಿಯೂ ಆತ್ಮಹತ್ಯೆಗೆ ಶರಣು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.