ETV Bharat / bharat

ದೇಶದ ಅತಿದೊಡ್ಡ ಲೋಕಸಭಾ ಕ್ಷೇತ್ರ ಮಲ್ಕಾಜ್‌ಗಿರಿಗೆ ಭಾರಿ ಡಿಮ್ಯಾಂಡ್​; ಕಣದಲ್ಲಿ 114 ಅಭ್ಯರ್ಥಿಗಳು! - Malkajgiri - MALKAJGIRI

ಈ ಹಿಂದೆ ಸಿಎಂ ರೇವಂತ್ ರೆಡ್ಡಿ ಪ್ರತಿನಿಧಿಸಿದ್ದ ತೆಲಂಗಾಣದ ಮಲ್ಕಾಜ್‌ಗಿರಿ ಲೋಕಸಭೆ ಕ್ಷೇತ್ರಕ್ಕೆ ಭಾರಿ ಡಿಮ್ಯಾಂಡ್​ ಬಂದಿದೆ. ಈ ಕ್ಷೇತ್ರದಲ್ಲಿ ಒಟ್ಟಾರೆ 114 ಅಭ್ಯರ್ಥಿಗಳು ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಉಮೇದುವಾರಿಕೆ ಹಿಂಪಡೆಯಲು ಏಪ್ರಿಲ್ 29 ಕೊನೆಯ ದಿನವಾಗಿದೆ.

biggest parliament constituency MALKAJGIRI
ದೇಶದ ಅತಿದೊಡ್ಡ ಲೋಕಸಭೆ ಕ್ಷೇತ್ರ ಮಲ್ಕಾಜ್‌ಗಿರಿ
author img

By ETV Bharat Karnataka Team

Published : Apr 26, 2024, 4:40 PM IST

Updated : Apr 26, 2024, 4:51 PM IST

ಹೈದರಾಬಾದ್(ತೆಲಂಗಾಣ): ದೇಶದ ಅತಿದೊಡ್ಡ ಸಂಸದೀಯ ಕ್ಷೇತ್ರವಾಗಿರುವ ತೆಲಂಗಾಣದ ಮಲ್ಕಾಜ್‌ಗಿರಿಯಿಂದ ಸ್ಪರ್ಧಿಸಲು ಭಾರಿ ಪೈಪೋಟಿ ಏರ್ಪಟ್ಟಿದೆ. ಕಾಂಗ್ರೆಸ್​, ಬಿಜೆಪಿ, ಬಿಆರ್​ಎಸ್​ನಂತಹ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ 114 ಅಭ್ಯರ್ಥಿಗಳಿಂದ 177 ನಾಮಪತ್ರ ಸಲ್ಲಿಕೆಯಾಗಿವೆ.

ಹೈದರಾಬಾದ್‌ ಹೊರವಲಯದ ವ್ಯಾಪ್ತಿಯನ್ನು ಮಲ್ಕಾಜ್‌ಗಿರಿ ಹೊಂದಿದೆ. ಅತ್ಯಧಿಕ 37.28 ಲಕ್ಷ ಮತದಾರರನ್ನು ಈ ಕ್ಷೇತ್ರ ಹೊಂದಿದೆ. ಚುನಾವಣಾ ಆಯೋಗದ ಪ್ರಕಾರ, ತೆಲಂಗಾಣದ ಎಲ್ಲ 17 ಲೋಕಸಭಾ ಕ್ಷೇತ್ರಗಳಿಗೆ ಒಟ್ಟು 895 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಗುರುವಾರ 348 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದು, ಬಹುತೇಕ ಸ್ವತಂತ್ರ ಅಭ್ಯರ್ಥಿಗಳೇ ಇದ್ದಾರೆ.

ಎಲ್ಲ ಕ್ಷೇತ್ರಗಳಲ್ಲಿ ಒಟ್ಟು 1,488 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಹಲವು ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚಿನ ಸೆಟ್‌ಗಳನ್ನು ಸಲ್ಲಿಸಿದ್ದಾರೆ. ಶುಕ್ರವಾರ ನಾಮಪತ್ರಗಳ ಪರಿಶೀಲನೆ ನಡೆದಿದೆ ಎಂದು ಮುಖ್ಯ ಚುನಾವಣಾಧಿಕಾರಿ ವಿಕಾಸ್ ರಾಜ್ ತಿಳಿಸಿದ್ದಾರೆ. ಉಮೇದುವಾರಿಕೆ ಹಿಂಪಡೆಯಲು ಏಪ್ರಿಲ್ 29 ಕೊನೆಯ ದಿನಾಂಕವಾಗಿದ್ದು, ಮೇ 13ರಂದು ಮತದಾನ ನಡೆಯಲಿದೆ.

ಮಲ್ಕಾಜಿಗಿರಿ ಕ್ಷೇತ್ರದಲ್ಲಿ ಕೊನೆಯ ದಿನವೇ 63 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಇದರಿಂದ ಒಟ್ಟು ಅಭ್ಯರ್ಥಿಗಳ ಸಂಖ್ಯೆ 114ಕ್ಕೆ ಏರಿಕೆಯಾಗಿದೆ. ಹೈದರಾಬಾದ್ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಹೊರವಲಯದಲ್ಲಿರುವ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಹರಡಿರುವ ಚೆವೆಲ್ಲಾ ಕೇತ್ರಕ್ಕೆ 66 ಸ್ಪರ್ಧಿಗಳು ನಾಮಮತ್ರ ಸಲ್ಲಿಸಿದ್ದಾರೆ. ಇದು ರಾಜ್ಯದ ಎರಡನೇ ಅತಿ ಹೆಚ್ಚು ಅಭ್ಯರ್ಥಿಗಳನ್ನು ಹೊಂದಿರುವ ಕ್ಷೇತ್ರವಾಗಿದೆ. ಇಲ್ಲಿ ಒಟ್ಟು 88 ನಾಮಪತ್ರಗಳು ಸಲ್ಲಿಕೆಯಾಗಿವೆ.

ಪೆದ್ದಪಲ್ಲಿಯಲ್ಲಿ 63 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರೆ, ಭುವನಗಿರಿನಲ್ಲಿ 61 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ವಾರಂಗಲ್ ಮತ್ತು ಹೈದರಾಬಾದ್‌ನಲ್ಲಿ ಕ್ರಮವಾಗಿ 58 ಮತ್ತು 57 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಸಿಕಂದರಾಬಾದ್ ಕ್ಷೇತ್ರದಲ್ಲೂ 57 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಆದಿಲಾಬಾದ್‌ ಕ್ಷೇತ್ರದಲ್ಲಿ ಅತಿ ಕಡಿಮೆ ಅಭ್ಯರ್ಥಿಗಳು (23) ನಾಮಪತ್ರ ಸಲ್ಲಿಸಿದ್ದಾರೆ. ಮಹಬೂಬ್‌ನಗರ ಮತ್ತು ನಿಜಾಮಾಬಾದ್‌ನಲ್ಲಿ ತಲ 42 ಸ್ಪರ್ಧಿಗಳು ನಾಮಪತ್ರ ಸಲ್ಲಿಸಿದ್ದಾರೆ. ಹೆಚ್ಚಿನ ಅಭ್ಯರ್ಥಿಗಳು ಸ್ವತಂತ್ರರು ಅಥವಾ ಸಣ್ಣ ಪಕ್ಷಗಳಿಗೆ ಸೇರಿದವರಾಗಿದ್ದಾರೆ. ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಆಡಳಿತಾರೂಢ ಕಾಂಗ್ರೆಸ್‌, ಬಿಆರ್‌ಎಸ್‌ ಮತ್ತು ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ.

2019ರ ಚುನಾವಣೆಯಲ್ಲಿ ಆಗ ಅಧಿಕಾರದಲ್ಲಿದ್ದ ಬಿಆರ್‌ಎಸ್ 9 ಕ್ಷೇತ್ರಗಳಲ್ಲಿ ಗೆದ್ದಿತ್ತು. ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಎಐಎಂಐಎಂ ಪಕ್ಷ ಹೈದರಾಬಾದ್​ನ​ ಒಂದೇ ಕ್ಷೇತ್ರದಲ್ಲಿ ಜಯ ಕಂಡಿತ್ತು. ಕಳೆದ ಬಾರಿ ಮಲ್ಕಾಜ್‌ಗಿರಿ ಕ್ಷೇತ್ರದಲ್ಲಿ ಹಾಲಿ ಸಿಎಂ ಆಗಿರುವ ರೇವಂತ್​ ರೆಡ್ಡಿ ಗೆದ್ದಿದ್ದರು. (ಐಎಎನ್​ಎಸ್​)

ಇದನ್ನೂ ಓದಿ: ಲಡಾಖ್​ನಲ್ಲಿ ಒಂದೇ ಒಂದು ಕುಟುಂಬದ ಮತದಾನಕ್ಕಾಗಿ ಮತಗಟ್ಟೆ ಸ್ಥಾಪನೆ

Last Updated : Apr 26, 2024, 4:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.