ಕಾಂಗ್ರೆಸ್ ಏನೇ ತಿಪ್ಪರಲಾಗ ಹಾಕಿದರೂ ಮತ್ತೆ ಅಧಿಕಾರಕ್ಕೆ ಬರಲ್ಲ: ಬಿಎಸ್​ವೈ - etv bharat kannada

🎬 Watch Now: Feature Video

thumbnail

By

Published : Sep 18, 2022, 1:41 PM IST

ಹುಬ್ಬಳ್ಳಿ: ರಾಜ್ಯದಲ್ಲಿ ಕಾಂಗ್ರೆಸ್ ಏನೇ ತಿಪ್ಪರಲಾಗ ಹಾಕಿದರೂ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವುದಿಲ್ಲ. ಜನ ಬಿಜೆಪಿ, ಮೋದಿ ಪರ ಇದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​​ ಭಾರತ ಜೊಡೋ ಯಾತ್ರೆ, ರಥಯಾತ್ರೆ ಸೇರಿ ಯಾವುದೇ ತಿಪ್ಪರಲಾಗ ಹಾಕಿದರೂ ಅಧಿಕಾರಕ್ಕೆ ಬರಲ್ಲ. ಚುನಾವಣೆ ಪ್ರಚಾರ ನಿಮಿತ್ತ ನಾನು ಸೆ. 22ರಿಂದ ರಾಜ್ಯ ಪ್ರವಾಸ ಮಾಡುತ್ತೇನೆ. ಬಳ್ಳಾರಿ ವಿಮ್ಸ್​ನಲ್ಲಿ ನಡೆದ ರೋಗಿಗಳ ಸಾವು ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ, ನೋಡೋಣ ಎಂದ ಬಿಎಸ್​ವೈ, ಈ ಪ್ರಕರಣ ಸರ್ಕಾರಕ್ಕೆ ನಷ್ಟ ಆಗಲ್ವಾ ಎಂಬ ಪ್ರಶ್ನೆಗೆ ಮೌನ ವಹಿಸಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.