ಸುರಪುರ: ಅದ್ಧೂರಿಯಾಗಿ ನೆರವೇರಿದ ಕುಸ್ತಿ ಕಾಳಗ - Surpura Wrestling match news
🎬 Watch Now: Feature Video
ಯಾದಗಿರಿ: ಆರಾಧ್ಯ ದೈವ ಶ್ರೀ ವೇಣುಗೋಪಾಲ ಸ್ವಾಮಿ ಹಾಲೋಕುಳಿ ಜಾತ್ರೆ ಅಂಗವಾಗಿ ಬಾಲಕರು ಮತ್ತು ವಯಸ್ಕರ ಕುಸ್ತಿ ಕಾಳಗ ಅಪಾರ ಜನಸ್ತೋಮದ ಮಧ್ಯೆ ಭರ್ಜರಿಯಾಗಿ ನಡೆಯಿತು. ಕುಸ್ತಿಪಟುಗಳು ತಮ್ಮ ಪ್ರತಿಸ್ಪರ್ಧಿ ವಿರುದ್ಧ ಹಾಕುತ್ತಿದ್ದ ಪಟ್ಟುಗಳನ್ನು ಕಂಡು ಪ್ರೇಕ್ಷಕರು ಕಿವಿಗಚ್ಚುವಂತೆ ಕೇಕೆ ಹಾಕುತ್ತಿದ್ದರು. ಮೈದಾನದಲ್ಲಿ ನಡೆದ ಒಂದೊಂದು ಸೆಣಸಾಟವು ಬಲು ರೋಚಕತೆಯಿಂದ ಕೂಡಿತ್ತು. ಯಾರನ್ನು ಕೆಳಗಡೆ (ಚಿತ್) ಮಾಡುತ್ತಾರೆ ಎಂಬುದನ್ನು ತೆರೆದ ಕಣ್ಣಿನಿಂದ ಕುಸ್ತಿ ಪ್ರಿಯರು ವೀಕ್ಷಿಸಿದರು. ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯದ 45ಕ್ಕೂ ಕುಸ್ತಿಪಟುಗಳು (ಪೈಲ್ವಾನರು) ಇದರಲ್ಲಿ ಪಾಲ್ಗೊಂಡಿದ್ದರು.