ಹಾವೇರಿ: ಭಾರತೀಯ ಶೈಲಿ ಮಣ್ಣಿನ ಕುಸ್ತಿ ಪೈಲ್ವಾನರ ಸಂಘ ಉದ್ಘಾಟನೆ - ಭಾರತೀಯ ಶೈಲಿ ಮಣ್ಣಿನ ಕುಸ್ತಿ ಫೈಲ್ವಾನರ ಸಂಘ
🎬 Watch Now: Feature Video
ಹಾವೇರಿ: ಮಣ್ಣಿನ ಕುಸ್ತಿ ಪೈಲ್ವಾನರ ಸಂಘವನ್ನು ಹಾವೇರಿ ಶಾಸಕ ನೆಹರು ಓಲೇಕಾರ್ ಉದ್ಘಾಟಿಸಿದರು. ಜಿಲ್ಲಾ ಕ್ರೀಡಾಂಗಣದಲ್ಲಿ ಕಾರ್ಯಕ್ರಮದಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ಆಯೋಜಿಸಲಾದ ರಾಜ್ಯಮಟ್ಟದ ಜಂಗಿ ನಿಖಾಲಿ ಕುಸ್ತಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ರಾಜ್ಯದ ವಿವಿಧೆಡೆಯಿಂದ 25ಕ್ಕೂ ಅಧಿಕ ಪುರುಷ, 5 ಜೋಡಿ ಮಹಿಳಾ ಕ್ರೀಡಾಪಟುಗಳು ಆಗಮಿಸಿದ್ದರು. ಇದಕ್ಕೂ ಮುನ್ನ ನೆಹರು ಓಲೇಕಾರ್ ಕಣದಲ್ಲಿ ಮಣ್ಣು ಹಿಡಿದು ಪೈಲ್ವಾನರಿಗೆ ಸೆಡ್ಡು ಹೊಡೆಯುವ ಮೂಲಕ ಪಂದ್ಯಾವಳಿಗೆ ಚಾಲನೆ ಕೊಟ್ಟರು. ಬೆಳಗಾವಿ, ಧಾರವಾಡ, ದಾವಣಗೆರೆ, ಚಿತ್ರದುರ್ಗದಿಂದ ಆಗಮಿಸಿದ ಪೈಲ್ವಾನರು ಕುಸ್ತಿಯಲ್ಲಿ ಎದುರಾಳಿಗಳ ವಿರುದ್ದ ತೊಡೆ ತಟ್ಟಿದರು. ಗೆದ್ದ ಪೈಲ್ವಾನರಿಗೆ ಬಹುಮಾನ ನೀಡಿ ಗೌರವಿಸಲಾಯಿತು.
Last Updated : May 17, 2022, 12:57 PM IST