ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರಯೋಧರಿಗೆ ಗೌರವ: ದ್ರಾಸ್‌ನಲ್ಲಿ ಸ್ಮಾರಕಕ್ಕೆ ಪುಷ್ಪ ನಮನ - ಲಡಾಖ್
🎬 Watch Now: Feature Video
ಲಡಾಖ್: 1999ರ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲು ದ್ರಾಸ್‌ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಇಂದು ಪುಷ್ಪಾರ್ಚನೆ ನಡೆಯಿತು. ಪಾಕಿಸ್ತಾನದ ಸೇನಾ ಪಡೆಗಳನ್ನು ಆಕ್ರಮಿತ ಪ್ರದೇಶಗಳಿಂದ ಹೊರಹಾಕುವ ಮೂಲಕ 1999ರ ಜುಲೈ 26ರಂದು ಯುದ್ಧ ಅಧಿಕೃತವಾಗಿ ಕೊನೆಗೊಂಡಿತ್ತು. ಇದರ ನೆನಪಿಗಾಗಿ ಹಾಗೂ ಯುದ್ಧದಲ್ಲಿ ಭಾಗಿಯಾದ ಭಾರತದ ಕೆಚ್ಚೆದೆಯ ಸೇನಾನಿಗಳನ್ನು ಸ್ಮರಿಸಿ ಗೌರವಿಸುವ ಹಾಗೂ ಹುತಾತ್ಮರಾದ 527 ಭಾರತೀಯ ವೀರ ಯೋಧರಿಗೆ ನಮನ ಸಲ್ಲಿಸಲು ಪ್ರತಿ ವರ್ಷ ಜುಲೈ 26 ರ ದಿನವನ್ನು 'ಕಾರ್ಗಿಲ್ ವಿಜಯ್ ದಿವಸ್' ಎಂದು ಆಚರಿಸಲಾಗುತ್ತಿದೆ.