ನವದೆಹಲಿ: ಸರ್ಕಾರದ ಅಧಿಕೃತ ಕೆಲಸಗಳಿಗಾಗಿ ಚಾಟ್‌ಜಿಪಿಟಿ ಮತ್ತು ಡೀಪ್ಸೀಕ್ನಂಥ ಕೃತಕ ಬುದ್ಧಿಮತ್ತೆ (ಎಐ) ಸಾಧನಗಳನ್ನು ಬಳಸದಂತೆ ಹಣಕಾಸು ಸಚಿವಾಲಯವು ತನ್ನ ಉದ್ಯೋಗಿಗಳಿಗೆ ಸೂಚಿಸಿದೆ. ಈ ಎಐ ಸಾಧನಗಳು ಗೌಪ್ಯ ಸರ್ಕಾರಿ ಡೇಟಾ ಮತ್ತು ದಾಖಲೆಗಳು ಬಹಿರಂಗವಾಗುವಂಥ ಅಪಾಯವನ್ನುಂಟು ಮಾಡಬಹುದು ಎಂದು ಇತ್ತೀಚೆಗೆ ಹೊರಡಿಸಲಾದ ಸಲಹೆಯಲ್ಲಿ ಎಚ್ಚರಿಸಲಾಗಿದೆ.
"ಕಚೇರಿ ಕಂಪ್ಯೂಟರ್ಗಳು ಮತ್ತು ಉಪಕರಣಗಳಲ್ಲಿನ ಎಐ ಸಾಧನಗಳು ಹಾಗೂ ಎಐ ಅಪ್ಲಿಕೇಶನ್ಗಳು (ಚಾಟ್‌ಜಿಪಿಟಿ ಮತ್ತು ಡೀಪ್‌ಸೀಕ್ ಇತ್ಯಾದಿ) ಸರ್ಕಾರಿ ಡೇಟಾ ಮತ್ತು ದಾಖಲೆಗಳ ಗೌಪ್ಯತೆಗೆ ಅಪಾಯ ಉಂಟುಮಾಡುತ್ತವೆ ಎಂದು ನಿರ್ಧರಿಸಲಾಗಿದೆ" ಎಂದು ಹಣಕಾಸು ಸಚಿವಾಲಯದ ಸಲಹೆಯಲ್ಲಿ ತಿಳಿಸಲಾಗಿದೆ.
ಜಾಗತಿಕವಾಗಿ ಸ್ಪರ್ಧಿಸಲು ಭಾರತ ತನ್ನದೇ ಆದ, ಸುರಕ್ಷಿತ ಮತ್ತು ಜವಾಬ್ದಾರಿಯುತ ಎಐ ಮಾದರಿಯನ್ನು ಅಭಿವೃದ್ಧಿಪಡಿಸಲು ಯೋಜಿಸಿದೆ ಎಂದು ಇತ್ತೀಚೆಗೆ ಕೇಂದ್ರ ರೈಲ್ವೆ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿರುವುದು ಗಮನಾರ್ಹ. ಭಾರತೀಯ ಎಐ ಮಾಡೆಲ್ ಮುಂಬರುವ ದಿನಗಳಲ್ಲಿ ನೈತಿಕ ಎಐ ಸಾಧನಗಳ ಹೆಚ್ಚು ವಿಶ್ವಾಸಾರ್ಹ ತಾಂತ್ರಿಕ ಶಕ್ತಿಕೇಂದ್ರವಾಗಿ ಹೊರಹೊಮ್ಮಲು ದೇಶಕ್ಕೆ ಸಹಾಯ ಮಾಡಲಿದೆ ಎಂದು ಸಚಿವರು ಹೇಳಿದರು.
ಚೀನಾ ಇತ್ತೀಚೆಗೆ ಬಿಡುಗಡೆ ಮಾಡಿರುವ ಎಐ ಅಪ್ಲಿಕೇಶನ್ ಡೀಪ್‌ಸೀಕ್ ಬಗ್ಗೆ ವಿಶ್ವಾದ್ಯಂತ ಸಂಶಯಗಳು ಬಲವಾಗುತ್ತಿವೆ. ಡಚ್ ಅಧಿಕಾರಿಗಳು ಇತ್ತೀಚೆಗೆ ಅದರ ಗೌಪ್ಯತೆ ನೀತಿಗಳ ಬಗ್ಗೆ ತನಿಖೆ ಪ್ರಾರಂಭಿಸಿದ್ದು, ಈ ಅಪ್ಲಿಕೇಶನ್ ಬಳಕೆದಾರರ ವೈಯಕ್ತಿಕ ಡೇಟಾವನ್ನು ನಿರ್ವಹಿಸುವ ರೀತಿಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಇತರ ಅನೇಕ ದೇಶಗಳಲ್ಲಿಯೂ ಡೀಪ್ ಸೀಕ್ ಮೇಲೆ ಇದೇ ರೀತಿಯ ನಿರ್ಬಂಧಗಳನ್ನು ವಿಧಿಸಲಾಗಿದೆ.
ಭಾರತೀಯ ಸರ್ವರ್ಗಳು ಚೀನಾದ ಹೊಸ ಕೃತಕ ಬುದ್ಧಿಮತ್ತೆ ಪ್ಲಾಟ್ ಫಾರ್ಮ್ ಡೀಪ್‌ಸೀಕ್ ಅನ್ನು ಹೋಸ್ಟ್ ಮಾಡಲಿದ್ದು, ಇದಕ್ಕೆ ಸಂಬಂಧಿಸಿದ ಗೌಪ್ಯತೆಯ ಅಪಾಯಗಳನ್ನು ಪರಿಶೀಲಿಸಲಾಗುತ್ತಿದೆ. ಡೀಪ್‌ಸೀಕ್ ಎಐ ಅನ್ನು ಚೀನಾದ ಕಂಪನಿಯು ತಯಾರಿಸಿರುವುದರಿಂದ ಇದರ ವಿಶ್ವಾಸಾರ್ಹತೆಯ ಬಗ್ಗೆ ಸಹಜವಾಗಿಯೇ ಆತಂಕಗಳು ಹೆಚ್ಚಾಗಿವೆ.
ಡೀಪ್‌ಸೀಕ್ ತಮ್ಮ ಎಪಿಐಗಳನ್ನು ನಕಲು ಮಾಡಿದೆ ಎಂದು ಶಂಕೆ ವ್ಯಕ್ತಪಡಿಸಿರುವ ಓಪನ್ಎಐ ಮತ್ತು ಮೈಕ್ರೋಸಾಫ್ಟ್ ಈ ಬಗ್ಗೆ ತನಿಖೆ ನಡೆಸುತ್ತಿವೆ. ಡೀಪ್‌ಸೀಕ್ ಇದು ಓಪನ್ಎಐನ ಚಾಟ್ ಜಿಪಿಟಿಗೆ ಪರ್ಯಾಯವಾಗಿ ಕೆಲಸ ಮಾಡಬಹುದು ಎಂದು ಹೇಳಲಾಗುತ್ತಿದೆ.
ಏತನ್ಮಧ್ಯೆ, ಬುಧವಾರ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಓಪನ್ಎಐ ಸಹ-ಸಂಸ್ಥಾಪಕ ಮತ್ತು ಸಿಇಒ ಸ್ಯಾಮ್ ಆಲ್ಟ್‌ಮನ್, ಭಾರತವು ಎಐನ ಬಹಳ ಮುಖ್ಯವಾದ ಮಾರುಕಟ್ಟೆಯಾಗಿದೆ ಮತ್ತು ಜಾಗತಿಕವಾಗಿ ತಮ್ಮ ಕಂಪೆನಿಯ ಎರಡನೇ ಅತಿದೊಡ್ಡ ಮಾರುಕಟ್ಟೆಯಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಕುಂಭಮೇಳ: ಜನದಟ್ಟಣೆ, ಕಾಲ್ತುಳಿತ ತಡೆಗೆ AI ತಂತ್ರಜ್ಞಾನ ಅಳವಡಿಕೆ