ಕೈಕೊಟ್ಟ ಮುಂಗಾರು ಮಳೆ.. ಬಿಜೆಪಿ ಶಾಸಕನ ಮೇಲೆ ಕೆಸರು ಎರಚಿದ ಮಹಿಳೆಯರು! - ಉತ್ತರ ಪ್ರದೇಶ ಮಳೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-15823604-thumbnail-3x2-wdfdfd.jpg)
ಮಹಾರಾಜ್ಗಂಜ್(ಉತ್ತರ ಪ್ರದೇಶ): ದೇಶದ ಕೆಲವೊಂದು ರಾಜ್ಯಗಳಲ್ಲಿ ವರುಣಾರ್ಭಟ ಜೋರಾಗಿದೆ. ಆದರೆ, ಉತ್ತರ ಪ್ರದೇಶದಲ್ಲಿ ಮುಂಗಾರು ಸಂಪೂರ್ಣವಾಗಿ ಕೈಕೊಟ್ಟಿದೆ. ಹೀಗಾಗಿ, ರೈತರು, ಮಹಿಳೆಯರು ವಿವಿಧ ಸಂಪ್ರದಾಯಗಳ ಮೊರೆ ಹೋಗುತ್ತಿದ್ದಾರೆ. ಸದ್ಯ ವರುಣನ ಮೆಚ್ಚಿಸುವ ಕಾರಣ ಮಹಾರಾಜ್ಗಂಜ್ ಮಹಿಳೆಯರು ಬಿಜೆಪಿ ಶಾಸಕ ಜೈ ಮಂಗಲ್ ಕನೋಜಿಯಾ ಮತ್ತು ಪುರಸಭೆ ಅಧ್ಯಕ್ಷ ಕೃಷ್ಣ ಗೋಪಾಲ್ ಜೈಸ್ವಾಲ್ ಅವರಿಗೆ ಕೆಸರು ಎರಚಿದ್ದಾರೆ. ಆ ಪ್ರದೇಶದ ಮುಖ್ಯಸ್ಥರಿಗೆ ಕೆಸರಿನಲ್ಲಿ ಸ್ನಾನ ಮಾಡಿಸಿದರೆ ಮಳೆಯಾಗುತ್ತದೆ ಎಂಬುದು ಇಲ್ಲಿನ ಜನರ ವಾಡಿಕೆಯಾಗಿದೆ.ಹೀಗಾಗಿ, ಶಾಸಕರು ಕೆಸರಿನ ನೀರು ತಮ್ಮ ಮೇಲೆ ಹಾಕಿಸಿಕೊಂಡಿದ್ದಾರೆ.