ಸ್ಕೂಟರ್ಗೆ ಡಿಕ್ಕಿ ಹೊಡೆದ ಬಸ್ ಚಾಲಕನಿಗೆ ಮಹಿಳೆಯಿಂದ ಕಪಾಳಮೋಕ್ಷ: ವಿಡಿಯೋ
🎬 Watch Now: Feature Video
ವಿಜಯವಾಡ (ಆಂಧ್ರಪ್ರದೇಶ): ತನ್ನ ಸ್ಕೂಟರ್ಗೆ ಡಿಕ್ಕಿ ಹೊಡೆದ ಕಾರಣಕ್ಕೆ ಸಾರಿಗೆ ಬಸ್ ಚಾಲಕನ ಮೇಲೆ ಮಹಿಳೆಯೊಬ್ಬರು ಹಲ್ಲೆ ನಡೆಸಿರುವ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ. ಬಸ್ ಗುದ್ದಿದ ಪರಿಣಾಮ ಮಹಿಳೆ ಕೆಳಗಡೆ ಬಿದ್ದಿದ್ದಾರೆ. ಇದರಿಂದ ಕೋಪಗೊಂಡ ಅವರು ಬಸ್ ಏರಿ ಡ್ರೈವರ್‌ಗೆ ಕಪಾಳಮೋಕ್ಷ ಮಾಡಿದ್ದಾರೆ. ಅಲ್ಲದೇ, ಚಾಲಕನ ಮೊಬೈಲ್ ಫೋನ್ಅನ್ನು ಮಹಿಳೆ ಕಸಿದುಕೊಂಡಿದ್ದಾರೆ. ಈ ಮಹಿಳೆಯ ಸಿಟ್ಟು ಕಂಡು ಪ್ರಯಾಣಿಕರು ಹಾಗೂ ದಾರಿಹೋಕರು ಬೆಚ್ಚಿಬಿದ್ದಿದ್ಧಾರೆ. ಶನಿವಾರ ಈ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.