ವಿಡಿಯೋ: ಮುಳುಗಡೆಯಾದ ಸೇತುವೆ ಮೇಲೆ ಬೈಕ್ ತೊಳೆಯುವ ಜನರು, ಅಪಾಯಕ್ಕೆ ಆಹ್ವಾನ! - people walk on water overflow bridge
🎬 Watch Now: Feature Video
ರಾಯಚೂರು: ನಾರಾಯಣಪುರ ಜಲಾಶಯ ಭರ್ತಿಯಾಗಿದ್ದು ಹೆಚ್ಚುವರಿ ನೀರನ್ನು ಕೃಷ್ಣಾ ನದಿಗೆ ಹರಿಸಲಾಗಿದೆ. ಸದ್ಯಕ್ಕೆ ಜಲಾಶಯದಲ್ಲಿ 1.60 ಲಕ್ಷ ಕ್ಯೂಸೆಕ್ ಒಳಹರಿವಿದ್ದು, 1.74 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಪರಿಣಾಮ ಲಿಂಗಸೂಗೂರು ತಾಲೂಕಿನ ಶೀಲಹಳ್ಳಿ ಬ್ರಿಡ್ಜ್ ಮುಳುಗಡೆಯಾಗಿದೆ. ಕಡದರಗಡ್ಡಿ, ಯರಗೋಡಿ-ಹಂಚಿನಾಳ ನಡುಗಡ್ಡೆ ಪ್ರದೇಶಗಳಿಗೆ ಸಂಚಾರ ಬಂದ್ ಆಗಲಿದೆ. ಆದ್ರೆ, ಗ್ರಾಮಸ್ಥರು ಅಪಾಯವನ್ನು ಲೆಕ್ಕಿಸದೇ ಮುಳುಗಡೆಯಾಗಿರುವ ಸೇತುವೆ ಮೇಲೆ ಬೈಕ್ ತೊಳೆಯುವುದು ಸೇರಿದಂತೆ ಓಡಾಡುತ್ತಿದ್ದಾರೆ.
Last Updated : Jul 17, 2022, 1:09 PM IST