ಇಟಲಿಯ ಕೂಡಲ ಸಂಗಮದಲ್ಲಿ ನೀರು- ಬೆಳಕಿನ ಹಬ್ಬ... ಕಣ್ಣಿಗೆ ನಿಜಕ್ಕೂ ಹಿತ- ವಿಡಿಯೊ ನೋಡಿ - ತಿಮಾವೊ
🎬 Watch Now: Feature Video
ತಿಮಾವೊ, ಐಸಾಕ್ ಹಾಗೂ ರಿಯಾನ್ಸ್ ಎಂಬ ಮೂರು ನದಿಗಳು ಸಂಗಮವಾಗುವ ಇಟಲಿಯ ಬ್ರೆಕ್ಸಿನ್ ನಗರ ತಾತ್ಕಾಲಿಕವಾಗಿ ಭೂಲೋಕದ ಒಂದು ಸ್ವರ್ಗದಂತೆ ರೂಪಾಂತರವಾಗಿದೆ. ಜಗತ್ತಿನ ಅನೇಕ ದೇಶಗಳ 24 ನುರಿತ ಕಲಾವಿದರು ಬ್ರೆಕ್ಸಿನ್ ಪಟ್ಟಣವನ್ನು ನೀರು ಹಾಗೂ ಬೆಳಕಿನಿಂದ ಅಲಂಕರಿಸಿದ್ದಾರೆ. ಈ ಊರಿನ ಎಲ್ಲ ಕಾರಂಜಿಗಳಿಗೂ ಬೆಳಕಿನ ಅಲಂಕಾರ ಮಾಡಲಾಗಿದೆ. ನದಿಗಳ ಸುತ್ತಲೂ ಸೀರಿಯಲ್ ಸೆಟ್ಗಳು ಜಗಮಗಿಸುತ್ತಿವೆ. ನೀರಿಗೆ ಈ ದೇಶದ ಜನ ಕೊಡುವ ಗೌರವ ಇದು. ವಿಶ್ವದ ಹಲವೆಡೆಯಿಂದ ಪ್ರವಾಸಿಗರು ಈ ಸ್ವರ್ಗವನ್ನು ಕಣ್ತುಂಬಿಕೊಳ್ಳಲು ಬರುತ್ತಿದ್ದಾರೆ.