ಸವಾರ ಸಮೇತ ದ್ವಿಚಕ್ರ ವಾಹನ ಕ್ರೇನ್ನಲ್ಲಿ ಎತ್ತಿಕೊಂಡು ಹೋದ ಟ್ರಾಫಿಕ್ ಪೊಲೀಸ್.. ವಿಡಿಯೋ - ಈಟಿವಿ ಭಾರತ
🎬 Watch Now: Feature Video
ನಾಗ್ಪುರ(ಮಹಾರಾಷ್ಟ್ರ): ನೋ ಪಾರ್ಕಿಂಗ್ ಪ್ರದೇಶದಲ್ಲಿ ದ್ವಿಚಕ್ರ ವಾಹನ ನಲ್ಲಿಸಿದ್ದ ವ್ಯಕ್ತಿಯೊಬ್ಬನನ್ನು ಟ್ರಾಫಿಕ್ ಪೊಲೀಸರು ಕ್ರೇನ್ ಸಹಾಯದಿಂದ ಎತ್ತಿಕೊಂಡು ಹೋಗಿದ್ದಾರೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ಈ ಘಟನೆ ನಡೆದಿದೆ. ಅಂಜುಮನ್ ಕಾಂಪ್ಲೆಕ್ಸ್ ಬಳಿ ನೋ ಪಾರ್ಕಿಂಗ್ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ದ್ವಿಚಕ್ರ ವಾಹನ ನಿಲ್ಲಿಸಿದ್ದಾನೆ. ಆದರೆ, ಇದು ನೋ ಪಾರ್ಕಿಂಗ್ ಸ್ಥಳವಾಗಿತ್ತು. ಟ್ರಾಫಿಕ್ ಪೊಲೀಸರು ಹಾಗೂ ಯುವಕನ ಮಧ್ಯೆ ಕೆಲ ಹೊತ್ತು ಈ ವಿಚಾರವಾಗಿ ವಾಗ್ವಾದ ನಡೆದಿದೆ. ಈ ವೇಳೆ, ಹೈಡ್ರಾಲಿಕ್ ಕ್ರೇನ್ ಸಮೇತ ಸ್ಥಳಕ್ಕಾಗಮಿಸಿದ ಟ್ರಾಫಿಕ್ ಸಿಬ್ಬಂದಿ ಬೈಕ್ ಸವಾರ ಸಮೇತವಾಗಿ ವಾಹನ ಮೇಲಿತ್ತಿದ್ದಾರೆ. ಇದನ್ನ ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆಗೆ ಸಂಬಂಧಿಸಿದಂತೆ ಟ್ರಾಫಿಕ್ ಸಂಚಾರಿ ಇಲಾಖೆ ತನಿಖೆಗೆ ಆದೇಶ ನೀಡಿದೆ.