ನಿಂಬೆಹಣ್ಣು ಬಾಯಲ್ಲಿಟ್ಟುಕೊಂಡು ಸಖತ್ ಡ್ಯಾನ್ಸ್ ಮಾಡಿದ ಸಚಿವ ಎಂಟಿಬಿ ನಾಗರಾಜ್ - ತಮಟೆ ಏಟಿಗೆ ಬಾಯಲ್ಲಿ ಲಿಂಬೆ ಹಣ್ಣು ಇಟ್ಟುಕೊಂಡು ಕುಣಿದ ನಾಗರಾಜ್
🎬 Watch Now: Feature Video
ಬೆಂಗಳೂರು: ಗರುಡಾಚಾರ್ ಪಾಳ್ಯದಲ್ಲಿ ನಡೆದ ಶ್ರೀರಾಮನವಮಿ ಪಲ್ಲಕ್ಕಿ ಉತ್ಸವದಲ್ಲಿ ಸಚಿವ ಎಂಟಿಬಿ ನಾಗರಾಜ್ ಸಖತ್ ಸ್ಟೆಪ್ ಹಾಕಿದ್ದಾರೆ. ಭಾನುವಾರ ಸಂಜೆ ನಡೆದ ಉತ್ಸವದಲ್ಲಿ ಭಾಗಿಯಾಗಿ ತಮಟೆ ಏಟಿಗೆ ಬಾಯಲ್ಲಿ ಲಿಂಬೆ ಹಣ್ಣು ಇಟ್ಟುಕೊಂಡು ಕುಣಿದಿದ್ದಾರೆ. 32 ಪಲ್ಲಕ್ಕಿ ದೇವರುಗಳ ಉತ್ಸವ ಮೆರವಣಿಗೆಯಲ್ಲಿ ಪಾಲ್ಗೊಂಡು ಸಚಿವ ಎಂಟಿಬಿ ನಾಗರಾಜ್ ಅವರು, ಟಪ್ಪಾಂಗುಚ್ಚಿ ಸ್ಟೆಪ್ಸ್ ಹಾಕಿದ್ದು, ಸ್ಥಳೀಯರು ಕೂಡ ಸಾಥ್ ನೀಡಿದ್ದಾರೆ. ಹೊಸಕೋಟೆಯಲ್ಲಿ ಅವಿಮುಕ್ತೇಶ್ವರ ಬ್ರಹ್ಮರಥೋತ್ಸವದಲ್ಲಿ ಭಾಗಿಯಾಗಿ ಗೊರವಯ್ಯನವರಂತೆ ತಲೆಗೆ ಟೋಪ, ಶಾಲು ಹಾಕಿಕೊಂಡು ಡಮರುಗ ಬಾರಿಸಿದರು.