ಭಾರತದ ಅತಿದೊಡ್ಡ ಸರೋವರದಲ್ಲಿ ಮುಳುಗಿದ ದೋಣಿ.. ನಾಲ್ವರು ಮೀನುಗಾರರ ರಕ್ಷಣೆ - ವೆಂಬನಾಡು ಸರೋವರದಲ್ಲಿ ಮೀನುಗಾರಿಕೆ
🎬 Watch Now: Feature Video
ಕೊಟ್ಟಾಯಂ(ಕೇರಳ): ಭಾರತದ ಅತಿದೊಡ್ಡ ಸರೋವರ ವೆಂಬನಾಡು ಸರೋವರದಲ್ಲಿ ಮೀನುಗಾರಿಕೆ ಮಾಡ್ತಿದ್ದ ವೇಳೆ ದೋಣಿ ಮಗುಚಿ ನೀರು ಪಾಲಾಗುತ್ತಿದ್ದ ನಾಲ್ವರ ರಕ್ಷಣೆ ಮಾಡಲಾಗಿದೆ. ಸರ್ಕಾರಿ ಜಲಮಾರ್ಗ ನೌಕರರು ಇವರ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಮೀನುಗಾರಿಕೆ ಮಾಡ್ತಿದ್ದ ವೇಳೆ ಜೋರಾದ ಗಾಳಿ ಬೀಸಿ, ದೋಣಿ ಮಗುಚಿ ಬಿದ್ದಿದೆ. ತಕ್ಷಣವೇ ಅವರನ್ನ ರಕ್ಷಣೆ ಮಾಡುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಇವರನ್ನ ಕಂಜುಮೋನ್, ಅನೂಪ್, ಸಾಬು ಮತ್ತು ರಾಜು ಎಂದು ಗುರುತಿಸಲಾಗಿದೆ.