ಮುದ್ದೇಬಿಹಾಳದಲ್ಲಿ ಭಾರಿ ಮಳೆಗೆ ಬೈಕ್​ ಮೇಲೆ ಬಿದ್ದ ಮರ, ಬಾಲಕಿ ಪಾರು - ಮಳೆಯಿಂದ ಬೈಕ್​ ಮೇಲೆ ಬಿದ್ದ ಮರ

🎬 Watch Now: Feature Video

thumbnail

By

Published : May 18, 2022, 9:20 AM IST

ಮುದ್ದೇಬಿಹಾಳ: ಪಟ್ಟಣದ ಗಣೇಶ ನಗರದಲ್ಲಿ ಭಾರಿ ಗಾಳಿ, ಮಳೆಗೆ ಬೇವಿನ ಮರವೊಂದು ಬೈಕ್ ಮೇಲೆ ಉರುಳಿ ಬಿದ್ದು, ವಾಹನ ಜಖಂಗೊಂಡಿದೆ. ಬೈಕ್ ಸಮೀಪದಲ್ಲೇ ಇದ್ದ ಬಾಲಕಿ ಕೂದಲೆಳೆ ಅಂತರದಲ್ಲಿ ಪಾರಾದಳು. ಇಂಗಳಗೇರಿ ಗ್ರಾಮದ ಚಂದ್ರಶೇಖರ ಬಿರಾದಾರ ಎಂಬುವವರ ಬೈಕ್​ ಇದಾಗಿದೆ ಎಂದು ತಿಳಿದು ಬಂದಿದೆ. ತಾಲೂಕಿನ ಹಲವೆಡೆ ವರುಣ ಆರ್ಭಟಿಸಿದ್ದು, ಹಲವೆಡೆ ಅವಾಂತರ ಸೃಷ್ಟಿಸಿದ್ದಾನೆ. ಮುಂದಿನ ಎರಡು ದಿನ ಭಾರಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.