2 ತಿಂಗಳ ನಂತರ ಓಪನ್ ಆಯ್ತು ಮೃಗಾಲಯ: ಪ್ರವಾಸಿಗರ ಆಕರ್ಷಣೆಯಾದ ಪಾಂಡಾ ! - latest zoo news
🎬 Watch Now: Feature Video

ಟೋಕಿಯೋ : ಕೊರೊನಾ ವೈರಸ್ನಿಂದಾಗಿ ಸಂಪೂರ್ಣ ಮುಚ್ಚಲಾಗಿದ್ದ ಯುನೋ ಮೃಗಾಲಯ ಫೆಬ್ರವರಿ ನಂತರ ಮೊದಲ ಬಾರಿಗೆ ಓಪನ್ ಆಗಿದ್ದು, ಮೃಗಾಲಯಕ್ಕೆ ನೂರಾರು ಸಂಖ್ಯೆಯಲ್ಲಿ ಟೋಕಿಯೋ ನಿವಾಸಿಗಳು ಭೇಟಿ ನೀಡಿದ್ದಾರೆ. ಮೃಗಾಲಯದಲ್ಲಿರುವ ಮೂರು ವರ್ಷದ ಪಾಂಡಾ ಮರಿ ಕ್ಸಿಯಾಂಗ್ ನೋಡಲು ಜನರು ಮುಗಿಬಿದ್ದಿರುವುದು ಕಂಡು ಬಂತು. ಇನ್ನು ಈ ಪಾಂಡಾ ಮರಿಯನ್ನು ಒಪ್ಪಂದದ ಪ್ರಕಾರ ಚೀನಾಗೆ ಹಸ್ತಾಂತರಿಸಬೇಕಾಗಿರುವುದರಿಂದ ಪಾಂಡಾವನ್ನು ನೋಡಲು ಜನರು ಮುಗಿ ಬಿದ್ದಿರುವುದು ವಿಶೇಷವಾಗಿತ್ತು.