ಲೋಕಸಭೆಯಲ್ಲಿ ಬದನೆಕಾಯಿ ಕಚ್ಚಿ ತಿಂದು ಬೆಲೆ ಏರಿಕೆಗೆ ಟಿಎಂಸಿ ಸಂಸದೆ ಆಕ್ರೋಶ - Etv bharat kannada

🎬 Watch Now: Feature Video

thumbnail

By

Published : Aug 1, 2022, 7:36 PM IST

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ನಡೆಯುತ್ತಿದ್ದು ಲೋಕಸಭೆ ಕಲಾಪದಲ್ಲಿ ಟಿಎಂಸಿ ಸಂಸದೆಯೋರ್ವರು ಬದನೆಕಾಯಿ ಕಚ್ಚಿ ತಿಂದಿರುವ ಪ್ರಸಂಗ ನಡೆಯಿತು. ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಚಾರವಾಗಿ ಚರ್ಚೆ ನಡೆಯುತ್ತಿದ್ದಾಗ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ಈ ರೀತಿಯಾಗಿ ನಡೆದುಕೊಂಡರು. "ದೇಶದಲ್ಲಿ ಅಡುಗೆ ಅನಿಲ ಬೆಲೆ ಹೆಚ್ಚಾಗಿದ್ದು ಬಡವರು ಅಡುಗೆ ಮಾಡುವುದು ಹೇಗೆ?. ಹಸಿ ತರಕಾರಿಗಳನ್ನು ತಿಂದು ಜೀವನ ನಡೆಸುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ" ಎಂದರು. ಕಳೆದ ಕೆಲ ತಿಂಗಳಲ್ಲಿ ಎಲ್​ಪಿಜಿ ಸಿಲಿಂಡರ್ ಬೆಲೆ ನಾಲ್ಕು ಸಲ ಏರಿಸಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.