ಮೊಟ್ಟೆ ಇಟ್ಟು ಕಾದುಕುಳಿತಿದ್ದ ನವೀಲನ್ನು ನುಂಗಿದ ಹೆಬ್ಬಾವು! - ಉರಗ ಪ್ರೇಮಿ ಮಹೇಶ್ ನಾಯ್ಕ
🎬 Watch Now: Feature Video

ಜಮಗೋಡ್ ವಕೀಲ ಬೀರಣ್ಣ ಮೊಗಟಾ ಮನೆ ಬಳಿ ತೋಟದಲ್ಲಿ ಮೊಟ್ಟೆ ಇಟ್ಟು ಕಾದು ಕುಳಿತಿದ್ದ ನವಿಲನ್ನು ಸುಮಾರು 12 ಅಡಿ ಉದ್ದದ ಹೆಬ್ಬಾವು ಬೇಟೆಯಾಡಿ ನುಂಗಿರುವ ಘಟನೆ ಅಂಕೋಲಾದ ಜಮಗೊಡ್ ರೈಲ್ವೆ ಸ್ಟೇಷನ್ ಬಳಿ ನಡೆದಿದೆ. ನವಿಲನ್ನು ನುಂಗಿ ಪೊದೆಯಲ್ಲಿ ಅವಿತು ಕುಳಿತಿದ್ದನ್ನು ಗಮನಿಸಿದ ತೋಟದ ಕೆಲಸಗಾರರು ವಕೀಲರಿಗೆ ತಿಳಿಸಿದ್ದರು. ಬಳಿಕ ಉರಗ ಪ್ರೇಮಿ ಮಹೇಶ್ ನಾಯ್ಕ ಅವರನ್ನು ಕರೆಸಿ ಸುಮಾರು ಒಂದೂವರೆ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಹೆಬ್ಬಾವನ್ನು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲಾಯಿತು.