ಜಲಾವೃತಗೊಂಡ ಬೀಸನಗದ್ದೆ ಗ್ರಾಮಕ್ಕೆ ತೆಪ್ಪದಲ್ಲಿ ತೆರಳಿ ಆಹಾರ ಪೊಟ್ಟಣ ವಿತರಿಸಿದ ತಹಶೀಲ್ದಾರ್ - Beesanagadde village in Sagar which was inundated due to Varadanadi
🎬 Watch Now: Feature Video
ಶಿವಮೊಗ್ಗ: ಭಾರಿ ಮಳೆಯಿಂದಾಗಿ ಇಲ್ಲಿನ ವರದಾನದಿ ತುಂಬಿ ಹರಿಯುತ್ತಿದ್ದು, ಸಾಗರ ತಾಲೂಕಿನ ಬೀಸನಗದ್ದೆ ಗ್ರಾಮ ಸಂಪೂರ್ಣ ಜಲಾವೃತಗೊಂಡಿದೆ. ಇದರಿಂದಾಗಿ ಈ ಗ್ರಾಮದ ರಸ್ತೆ ಸಂಪರ್ಕ ಕಡಿತಗೊಂಡಿದೆ. ಈ ಗ್ರಾಮದಲ್ಲಿ ಒಟ್ಟು 25 ಕುಟುಂಬಗಳಿದ್ದು, 120ಕ್ಕೂ ಹೆಚ್ಚು ಜನ ಇಲ್ಲಿ ವಾಸಿಸುತ್ತಿದ್ದಾರೆ. ಸಂಪರ್ಕ ಕಳೆದುಕೊಂಡ ಗ್ರಾಮಕ್ಕೆ ಸಾಗರ ತಹಶೀಲ್ದಾರ್ ರಾದ ಮಲ್ಲೇಶ್ ಪೂಜಾರ್ ಅವರು ತೆಪ್ಪದಲ್ಲಿ ತೆರಳಿ ಜನರ ಆರೋಗ್ಯ ವಿಚಾರಿಸುವ ಜೊತೆಗೆ ಅವರಿಗೆ ಆಹಾರದ ಪೊಟ್ಟಣಗಳನ್ನು ನೀಡಿದ್ದಾರೆ. ಮಳೆಗಾಲದಲ್ಲಿ ವರದಾನದಿ ಉಕ್ಕಿ ಹರಿದಾಗ ಬೀಸನಗದ್ದೆ ಗ್ರಾಮವು ಜಲಾವೃತವಾಗುತ್ತಿದ್ದು, ಇಲ್ಲಿನ ಜನರ ಬದುಕು ದುಸ್ತರವಾಗಿದೆ.
Last Updated : Jul 12, 2022, 3:26 PM IST