ಬೃಹತ್ ಗುಡ್ಡ ಕುಸಿತದಿಂದ ಹೆದ್ದಾರಿ ಸಂಚಾರ ಬಂದ್: ಭಯಾನಕ ವಿಡಿಯೋ
🎬 Watch Now: Feature Video
ಉತ್ತರಾಖಂಡ: ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿತ ಹಿನ್ನೆಲೆಯಲ್ಲಿ ಇಲ್ಲಿನ ತವಾಘಾಟ್ ಲಿಪುಲೇಖ್ ರಾಷ್ಟ್ರೀಯ ಹೆದ್ದಾರಿ ಸಂಚಾರ ಬಂದ್ ಆಗಿದೆ. ನಜಾಂಗ್ ತಾಂಬಾ ಗ್ರಾಮದ ಮೂಲಕ ಹಾದು ಹೋಗುವ ಆದಿ ಕೈಲಾಸ ಮಾನಸ ಸರೋವರ ಯಾತ್ರೆ ಮಾರ್ಗ ಮುಚ್ಚಿದ್ದು, ಸ್ಥಳೀಯರು ಸೇರಿದಂತೆ 40 ಪ್ರಯಾಣಿಕರು ಪರದಾಡುವಂತಾಗಿತ್ತು. ಘಟನೆಯಿಂದ ಜಿಲ್ಲಾ ಕೇಂದ್ರದಿಂದ ಚೀನಾ ಗಡಿ ಸಮೀಪದ ಗ್ರಾಮಗಳು ಸಂಪರ್ಕ ಕಡಿತಗೊಂಡಿವೆ. ಇತ್ತೀಚೆಗೆ ಮಾಲ್ಘಾಟ್‌ನಲ್ಲಿ ಭೂಕುಸಿತದಿಂದ ಈ ರಸ್ತೆ ಬಂದ್ ಆಗಿತ್ತು. ಗುಡ್ಡ ಕುಸಿತದ ಕ್ಷಣದ ವಿಡಿಯೋ ಸೆರೆ ಹಿಡಿಯಲಾಗಿದ್ದು, ಭಾರಿ ಪ್ರಮಾಣದಲ್ಲಿ ಧೂಳು ಆವರಿಸಿರುವುದು ಕಂಡುಬಂದಿದೆ. ಸ್ಥಳದಲ್ಲಿದ್ದ ಜನರು ಭಯಭೀತರಾಗಿ ಓಡಿದ್ದಾರೆ.