ಪ್ರತಾಪ್ ಸಿಂಹ ಹೇಳಿಕೆಗೆ ತನ್ವೀರ್ ಸೇಠ್ ತಿರುಗೇಟು.. ಮಂಗಗಳಿಗೆ ಹೋಲಿಸಿ ವ್ಯಂಗ್ಯ - Tanveer Seth reacted Pratap Sinha
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10758956-thumbnail-3x2-dfghg.jpg)
ಮೈಸೂರು : ಮೇಯರ್ ಚುನಾವಣೆ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಅಲ್ಲೇ ಶಾಸಕ ತನ್ವೀರ್ ಸೇಠ್ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯರನ್ನ ಮೈಸೂರು ಹುಲಿ ಅಂತಿದ್ರು, ಈಗ ಆ ಹುಲಿಯನ್ನ ಹೆಚ್‌ಡಿಕೆ ಬೋನಿಗೆ ಹಾಕಿದ್ದಾರೆ. ಇದು ಕಾಂಗ್ರೆಸ್ ದಿವಾಳಿಯ ಮುನ್ಸೂಚನೆ. ಎಂಬ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕ ತನ್ವೀರ್‌ಸೇಠ್, ಹುಲಿ ಎಲ್ಲಿರುತ್ತೆ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ, ಮಂಗಗಳು ಎಲ್ಲಿರುತ್ತವೆ ನೋಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.