ಕಲ್ಲಂಗಡಿ ಒಡೆದವರಿಗೆ ಕಲ್ಲಂಗಡಿ ಒಡೆದು ಸ್ವಾಗತ ಕೋರಿದ ಶ್ರೀರಾಮಸೇನೆ - Srirama Sena welcomes watermelon breakers
🎬 Watch Now: Feature Video

ಧಾರವಾಡ : ಶ್ರೀರಾಮಸೇನೆಯು ನುಗ್ಗಿಕೇರಿ ಹಿಂದೂಯೇತರ ವ್ಯಾಪಾರಿಗಳ ತೆರವು ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದ ತಮ್ಮ ಕಾರ್ಯಕರ್ತರಿಗೆ ಕುಂಬಳಕಾಯಿ ಬದಲಿಗೆ ಕಲ್ಲಂಗಡಿ ಹಣ್ಣುಗಳನ್ನು ಹೊಡೆಯುವ ಮೂಲಕ ಸ್ವಾಗತಿಸಿದೆ. ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾದ ಶ್ರೀರಾಮಸೇನಾ ಕಾರ್ಯಕರ್ತರಿಗೆ ಕಲ್ಲಂಗಡಿ ಒಡೆಯುವ ಮೂಲಕ ಧಾರವಾಡ ಸಾಧನಕೇರಿಯಲ್ಲಿರುವ ಕಚೇರಿಗೆ ಸ್ವಾಗತಿಸಲಾಗಿದೆ. ಮೈಲಾರಪ್ಪ, ಮಹಾಲಿಂಗ, ಚಿದಾನಂದ ಮತ್ತು ಕುಮಾರ ಎಂಬುವವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಹಿಂದೂಯೇತರ ವ್ಯಾಪಾರಿಗಳ ಅಂಗಡಿ ತೆರವು ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದರು. ಗಲಾಟೆಯಲ್ಲಿ ಕಲ್ಲಂಗಡಿ ಅಂಗಡಿ ದ್ವಂಸ ಮಾಡಿದ ಆರೋಪದ ಮೇಲೆ ಜೈಲು ಸೇರಿದ್ದರು..