ಕೈಮುಗಿದು ಬೇಡಿಕೊಂಡರೂ ಬಿಡದ ಪಾಪಿ.. ಹೆತ್ತಮ್ಮನಿಗೆ ಬೆಲ್ಟ್ನಿಂದ ಥಳಿಸಿದ ಮಗ! - ಬೆಲ್ಟ್ನಿಂದ ತಾಯಿ ಮೇಲೆ ಹಲ್ಲೆ
🎬 Watch Now: Feature Video
ಫತೇಹಾಬಾದ್(ಹರಿಯಾಣ): ಪಾಪಿ ಮಗನೋರ್ವ ಹೆತ್ತಮ್ಮನ ಮೇಲೆ ಅಮಾನವೀಯ ರೀತಿಯಲ್ಲಿ ಹಲ್ಲೆ ನಡೆಸಿದ್ದಾನೆ. ಹರಿಯಾಣದ ಫತೇಹಾಬಾದ್ನಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆಗಿವೆ. ಬೆಲ್ಟ್ನಿಂದ ತಾಯಿ ಮೇಲೆ ಮಗ ಹಲ್ಲೆ ನಡೆಸಿದ್ದು, ಈ ವೇಳೆ ಕೈಮುಗಿದು ಬೇಡಿಕೊಂಡರೂ ಆತ ಬಿಟ್ಟಿಲ್ಲ. ಭುನಾ ಪಟ್ಟಣದ ವಾರ್ಡ್ ಸಂಖ್ಯೆ 13ರಲ್ಲಿ ಈ ಘಟನೆ ನಡೆದಿದೆ. ಜುಲೈ 9ರಂದು ರಾತ್ರಿ ವೇಳೆ ಸಹೋದರಿ ಜೊತೆ ಮೊಬೈಲ್ನಲ್ಲಿ ಮಾತನಾಡುತ್ತಿದ್ದಾಗ ತಾಯಿ ಮೇಲೆ ಮಗ ಮನ ಬಂದಂತೆ ಥಳಿಸಿದ್ದಾನೆ. ಸಂತ್ರಸ್ತ ತಾಯಿ ಕಮಲಾದೇವಿ ಇದೀಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.