ಕರ್ನಾಟಕದ ಕಾಶ್ಮೀರದಲ್ಲಿ ನಿಲ್ಲದ ಮಾನವ-ಕಾಡು ಪ್ರಾಣಿಗಳ ಸಂಘರ್ಷ! - ಕಾಡಾನೆಗಳ ಉಪಟಳವಂತೂ ಮಿತಿ ಮೀರಿದ್ದು
🎬 Watch Now: Feature Video
ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆಂತಯ್ಯ? ಎನ್ನುವ ವಚನದಂತೆ ಮನುಷ್ಯ ತನ್ನೆಲ್ಲಾ ಆಸೆ-ಆಮಿಷಗಳನ್ನು ಈಡೇರಿಸಿಕೊಳ್ಳಲು ಏನೆಲ್ಲಾ ಮಾಡುತ್ತಿದ್ದಾನೆ. ತನ್ನ ಅಸ್ತಿತ್ವಕ್ಕಾಗಿ ಸ್ವಾಭಾವಿಕವಾಗಿ ಬೆಳೆದ ಹಸಿರು ಕಾನನದಲ್ಲಿ ಸ್ವಚ್ಛಂದವಾಗಿ ಬದುಕುವ ಜೀವಿಗಳ ಜೊತೆಗೆ ನಿರಂತರವಾಗಿ ಸೆಣಸಾಡುತ್ತಿದ್ದಾನೆ. ಇದರ ಪರಿಣಾಮವೇ ಕಾಡು ಪ್ರಾಣಿಗಳು ಹಾಗೂ ಮನುಷ್ಯನ ನಡುವೆ ಒಂದಿಲ್ಲೊಂದು ಸಂಘರ್ಷ ಇದ್ದೇ ಇರುತ್ತದೆ.