ಡ್ರೋನ್ ಕ್ಯಾಮರಾದಲ್ಲಿ ಸೆರೆಯಾದ ಜೋಗದ ನಯನ ಮನೋಹರ ದೃಶ್ಯ : ವಿಡಿಯೋ ವೈರಲ್ - Shivamogga jog falls
🎬 Watch Now: Feature Video
ಶಿವಮೊಗ್ಗ: ಜೋಗ ಜಲಪಾತ ಮೈದುಂಬಿ ಹರಿಯುವಾಗ ನಿಂತು ನೋಡುವುದೇ ಒಂದು ಅದ್ಬುತ. ಸದ್ಯ ಮಳೆಯಿಂದಾಗಿ ಜೋಗ ಜಲಪಾತ ತುಂಬಿ ಹರಿಯುತ್ತಿದೆ. ಸುಮಾರು 912 ಮೀಟರ್ ಎತ್ತರದಿಂದ ನೀರು ಧುಮ್ಮಿಕ್ಕುವ ದೃಶ್ಯ ಎಂಥವರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ. ಸದ್ಯ ಡ್ರೋನ್ನಿಂದ ಚಿತ್ರೀಕರಿಸಲಾದ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ದೃಶ್ಯದಲ್ಲಿ ಶರಾವತಿ ನದಿಯು ಜಲಪಾತವಾಗಿ ಮೇಲಿದ್ದ ಕೆಳಗೆ ಧುಮ್ಮಿಕ್ಕುವ ದೃಶ್ಯವನ್ನು ನಯನ ಮನೋಹರವಾಗಿ ಸೆರೆಹಿಡಿಯಲಾಗಿದೆ. ಮಳೆಗಾಲದಲ್ಲಿ ಮಾತ್ರ ಇಂತಹ ಸುಂದರ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗುತ್ತದೆ.