ಚಿತ್ತಾಪುರ ಪಟ್ಟಣದಲ್ಲಿ ಸರಣಿ ಕಳ್ಳತನ: ಸಿಸಿಟಿವಿಯಲ್ಲಿ ಕಳ್ಳರ ಕೈಚಳಕ ಸೆರೆ - ಚಿತ್ತಾಪುರ ಪಟ್ಟಣದಲ್ಲಿ ಸರಣಿ ಕಳ್ಳತನ
🎬 Watch Now: Feature Video
ಕಲಬುರಗಿ: ಚಿತ್ತಾಪುರ ಪಟ್ಟಣದಲ್ಲಿ ಶನಿವಾರ ಮಧ್ಯರಾತ್ರಿ ಸರಣಿ ಕಳ್ಳತನ ನಡೆದಿದೆ. ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಎದುರುಗಡೆ ಇರುವ ಜನತಾ ಮೆಡಿಕಲ್, ಮಾರುಕಟ್ಟೆಯಲ್ಲಿರುವ ಸಂಜೀವ ಮೆಡಿಕಲ್, ವಸೀಂ ತಾರಿ ಹೋಟೆಲ್ ಹಾಗೂ ಇಮ್ತಿಯಾಜ ತರಕಾರಿ ಅಂಗಡಿ ಸೇರಿ ಒಟ್ಟು ಆರು ಅಂಗಡಿಗಳಲ್ಲಿ ಘಟನೆ ನಡೆದಿದೆ. ಅಂಗಡಿಗಳ ಶಟರ್ ಮುರಿದು ಒಳನುಗ್ಗಿದ ಕಿಡಿಗೇಡಿಗಳು ಬೆಲೆ ಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ. ಕಳ್ಳರ ಕೈಚಳಕ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.