ಹೆಣ್ಮಕ್ಳಿಗೂ ಗುಂಡು ಬೇಕು ಗುರು, ಸುರಪಾನದಲ್ಲೂ ಪುರುಷರೊಂದಿಗೆ ಸಮಾನತೆ!! - ಮಹಿಳೆಯರಿಗೆ ಪ್ರತ್ಯೇಕ ಎರಡು ಸಾಲು

🎬 Watch Now: Feature Video

thumbnail

By

Published : May 4, 2020, 1:20 PM IST

Updated : May 4, 2020, 6:38 PM IST

ಎಲೆಕ್ಟ್ರಾನಿಕ್ ಸಿಟಿಯ ಡ್ರಾಪ್ ಬಾರ್ ಮುಂದೆ ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ಎರಡು ಸಾಲು ಮಾಡಿ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದಾರೆ. ಬಾರ್​ ಮುಂದೆ ಕಿರಿಕಿರಿಯಾಗಬಾರದೆಂದು ಮಾಲೀಕರು ಈ ಕ್ರಮಕೈಗೊಂಡಿದ್ದಾರೆ. ಒಂದೂವರೆ ತಿಂಗಳು ಎಣ್ಣೆಯಿಲ್ಲದ ವ್ರತಾಚರಣೆ ಇದೀಗ ಮುರಿದಂತಾಗಿದೆ. ಬೆಳಗ್ಗೆಯಿಂದಲೇ ಸಾಲು ಬೆಳೆಯುತ್ತಲೇ ಇದ್ದು ,ತಮ್ಮಿಷ್ಟದ ಬ್ರಾಂಡ್ ಸಿಕ್ಕ ಖುಷಿಯಲ್ಲಿ ಬಾಟಲಿಯೊಂದಿಗೆ ಹುಡುಗಿಯರು ಹೊರ ನಡೆದಿದ್ದಾರೆ. ಸಿಲಿಕಾನ್ ವ್ಯಾಲಿ ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ನಗರದ ಮುಖ್ಯ ರಸ್ತೆಯಲ್ಲಿರುವ ಬಾರ್ ಮುಂದೆ ಹೈಟೆಕ್ ಹುಡುಗಿಯರು-ಹುಡುಗರು ಪ್ರತ್ಯೇಕ ಸಾಲಿನಲ್ಲಿ ನಿಂತಿರುವುದನ್ನು ಕಂಡು ಗ್ರಾಮೀಣ ಭಾಗದ ನಾಗರಿಕರು ಬಾಯಿ ಮೇಲೆ ಬೆರಳಿಟ್ಟು ಬೆರಗುಗಣ್ಣಿಂದ ನೋಡುತ್ತಿದ್ದಾರೆ. ಅದರಂತೆ ಆನೇಕಲ್​ನ ಬಾರುಗಳ ಮುಂದೆ ಕುಡುಕ ಮಹಾರಾಜರ ಸಾಲಿನಲ್ಲಿ ಮಹಿಳೆಯರೂ ನಿಂತು ಸಮಾನತೆ ಸಾರಿದ್ದಾರೆ.
Last Updated : May 4, 2020, 6:38 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.