ಪುರಿ ಸಮುದ್ರ ತಟದಲ್ಲಿ ಮಲಗಿರುವ 'ಧೂಮಪಾನಿ ಶವ' - ಕಲಾವಿದ ಸುದರ್ಶನ್ ಪಟ್ನಾಯಕ್ರ ಕಲ್ಪನೆಯ ಮರಳು ಶಿಲ್ಪ
🎬 Watch Now: Feature Video

ಪುರಿ(ಒಡಿಶಾ): ಇಂದು 'ವಿಶ್ವ ತಂಬಾಕು ರಹಿತ ದಿನ'ದ ಹಿನ್ನೆಲೆ ಅಂತಾರಾಷ್ಟ್ರೀಯ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಪುರಿಯ ಸಮುದ್ರ ತೀರದಲ್ಲಿ 'ಧೂಮಪಾನ ದುಷ್ಪರಿಣಾಮಗಳ ಕುರಿತ' ಮರಳು ಶಿಲ್ಪವನ್ನು ರಚಿಸಿದ್ದಾರೆ. ಮರಳಿನ ಶಿಲ್ಪವು ಧೂಮಪಾನವು ಮಾನವನ ದೇಹಕ್ಕೆ ಎಷ್ಟು ಮಾರಕವಾಗಬಹುದು ಎಂಬುದನ್ನು ಪ್ರತಿಬಿಂಬಿಸುತ್ತದೆ. ಸಿಗರೇಟ್ ತಾನೂ ಸುಡುವುದಲ್ಲದೇ ಮಾನವನ ಆರೋಗ್ಯವನ್ನೂ ಹೇಗೆ ನಾಶ ಮಾಡುತ್ತದೆ ಎಂಬುದನ್ನು ಮರಳು ಶಿಲ್ಪ ಕಣ್ಣಿಗೆ ಕಟ್ಟುವಂತೆ ವಿವರಿಸುತ್ತದೆ.