ಚಲಿಸುತ್ತಿದ್ದ ರೈಲು ಏರಲು ಹೋಗಿ ಜಾರಿ ಬಿದ್ದ ವ್ಯಕ್ತಿ: ಪ್ರಾಣ ಕಾಪಾಡಿದ ಆರ್ಪಿಎಫ್ ಸಿಬ್ಬಂದಿ - ಚಲಿಸುತ್ತಿದ್ದ ರೈಲು ಏರಲು ಹೋಗಿ ಜಾರಿ ಬಿದ್ದ ವ್ಯಕ್ತಿ
🎬 Watch Now: Feature Video
ಪಾಟ್ನಾ(ಬಿಹಾರ): ಇಲ್ಲಿನ ಮೊಕಾಮಾ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ನಂಬರ್ ಮೂರರಲ್ಲಿ ಚಲಿಸುತ್ತಿದ್ದ ರೈಲು ಏರಲು ಮುಂದಾಗಿ ವ್ಯಕ್ತಿಯೋರ್ವ ಸಾವಿನ ದವಡೆಗೆ ಸಿಲುಕಿದ್ದರು. ರೈಲು ಹತ್ತುವಾಗ ಪ್ರಯಾಣಿಕನ ಕಾಲು ಜಾರಿದ ಪರಿಣಾಮ ಅವರು ಫ್ಲಾಟ್ಫಾರ್ಮ್ನ ಕೆಳಗೆ ಬಿದ್ದರು. ಅಲ್ಲಿದ್ದ ಪ್ರಯಾಣಿಕರು ಆ ವ್ಯಕ್ತಿಯನ್ನು ಮೇಲೆತ್ತಲು ಪ್ರಯತ್ನಿಸಿದರು. ಆದರೆ ಸಾಧ್ಯವಾಗಲಿಲ್ಲ. ತಕ್ಷಣ ಅಲ್ಲಿಗೆ ಬಂದ ಆರ್ಪಿಎಫ್ ಸಿಬ್ಬಂದಿ ಆ ವ್ಯಕ್ತಿಯನ್ನು ಜಾಗ್ರತೆಯಿಂದ ಮೇಲಕ್ಕೆ ಎತ್ತಿ ಫ್ಲಾಟ್ಫಾರ್ಮ್ಗೆ ಕರೆತಂದರು. ಈ ಎಲ್ಲಾ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರಯಾಣಿಕನನ್ನು ಜಸ್ಪಾಲ್ ಸಿಂಗ್ ಎಂದು ಗುರುತಿಸಲಾಗಿದೆ. ಈ ವ್ಯಕ್ತಿಯ ಜೀವ ಉಳಿಸಿದ ಆರ್ಪಿಎಫ್ ಸಿಬ್ಬಂದಿಯ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗ್ತಿದೆ.