ತುಂಗಭದ್ರಾ ಭೋರ್ಗರೆತ: ನೀರು 10 ಮೀಟರ್ಗಿಂತ ಹೆಚ್ಚಾದ್ರೆ 63 ಹಳ್ಳಿಗಳಿಗೆ ಸಂಕಷ್ಟ.. ವಾಕ್ ಥ್ರೂ - Flood threat in Davangere
🎬 Watch Now: Feature Video
ದಾವಣಗೆರೆ : ಮಲೆನಾಡು ಭಾಗದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ತುಂಗಾಭದ್ರಾ ನದಿ ಮೈತುಂಬಿ ಹರಿಯುತ್ತಿದೆ. ಈ ನದಿಯ ತಟದಲ್ಲಿರುವ ಹೊನ್ನಾಳಿ ಹಾಗೂ ಹರಿಹರ ತಾಲೂಕಿನ ಗ್ರಾಮಗಳು ಹಾಗೂ ಜಮೀನು ಪ್ರದೇಶಗಳು ಮುಳುಗಡೆಯಾಗುವ ಭೀತಿ ಎದುರಾಗಿದೆ. ಎರಡು ತಾಲೂಕುಗಳ ಪೈಕಿ 65ಕ್ಕೂ ಹೆಚ್ಚು ಗ್ರಾಮಗಳಿಗೆ ತೊಂದರೆಯಾಗಲಿದ್ದು, ಸಾವಿರಾರು ಹೆಕ್ಟೇರ್ ಜಮೀನು ಪ್ರದೇಶಗಳು ಮುಳುಗಡೆಯಾಗಲಿವೆ. ಈಗಾಗಲೇ 9.5 ಮೀಟರ್ನಷ್ಟು ನೀರು ಹರಿಯುತ್ತಿದ್ದು, ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ಇದರಿಂದ ಮತ್ತಷ್ಟು ಪ್ರವಾಹ ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ ಜಿಲ್ಲಾಡಳಿತ ಹಾಗೂ ಹೊನ್ನಾಳಿ, ಹರಿಹರ ತಾಲೂಕು ಆಡಳಿತ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದು, ಯಾರು ಕೂಡ ನದಿ ಪಾತ್ರಕ್ಕೆ ಹೋಗದಂತೆ ಎಚ್ಚರಿಕೆ ನೀಡಿದೆ. ಈ ಬಗ್ಗೆ ಈಟಿ ಭಾರತ್ ಪ್ರತಿನಿಧಿ ನೀಡಿರುವ ವಾಕ್ ಥ್ರೂ ಇಲ್ಲಿದೆ..
Last Updated : Jul 14, 2022, 1:00 PM IST