ಮಧ್ಯರಾತ್ರಿ 4 ಗಂಟೆಗಳ ಕಾರ್ಯಾಚರಣೆ: ನೀರಿನಲ್ಲಿ ಸಿಲುಕಿದ್ದ ರೈತನ ರಕ್ಷಣೆ - ಈಟಿವಿ ಭಾರತ್ ಕನ್ನಡ
🎬 Watch Now: Feature Video

ಚಾಮರಾಜನಗರ: ನೀರಿನಲ್ಲಿ ಸಿಲುಕಿದ್ದ ರೈತನನ್ನು ಮಧ್ಯರಾತ್ರಿ ನಾಲ್ಕು ತಾಸು ಕಾರ್ಯಾಚರಣೆ ನಡೆಸಿ ರಕ್ಷಿಸಿರುವ ಘಟನೆ ಚಾಮರಾಜನಗರ ತಾಲೂಕಿನ ಕಣ್ಣೇಗಾಲ ಗ್ರಾಮದಲ್ಲಿ ನಡೆಯಿತು. ರಾಮಸ್ವಾಮಿ ನಾಯಕ್(62) ರಕ್ಷಣೆಗೊಳಗಾದ ವ್ಯಕ್ತಿ. ಮಳೆ ಹೆಚ್ಚಾದ ಕಾರಣ ರೈತ ಜಮೀನಿನಲ್ಲೇ ಸಿಲುಕಿಕೊಂಡಿದ್ದ ಮಾಹಿತಿ ಪಡೆದ ಪೊಲೀಸರು, ತಹಶೀಲ್ದಾರ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿದ್ದರು.