ಕಾಮನ್ವೆಲ್ತ್ನಲ್ಲಿ ಚಿನ್ನ ಗೆದ್ದ ಸಿಂಧು: ಪ್ರಧಾನಿ ಜತೆ ಐಸ್ಕ್ರೀಂ ಸವಿಯುವ ಬಗ್ಗೆ ಹೇಳಿದ್ದೇನು? - ಬ್ಯಾಡ್ಮಿಂಟನ್ನಲ್ಲಿ ಚಿನ್ನ ಗೆದ್ದ ಸಿಂಧು
🎬 Watch Now: Feature Video
ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತದ ಭರವಸೆಯ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಚಿನ್ನದ ಪದಕ ಗೆದ್ದಿದ್ದಾರೆ. ಈ ಮೂಲಕ ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಹೊಸ ದಾಖಲೆ ಬರೆದರು. ಗೆಲುವಿನ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮತ್ತೊಮ್ಮೆ ಐಸ್ಕ್ರೀಂ ಸವಿಯುವ ಆಸೆ ಇದೆಯೇ ಎಂದು ಪ್ರಶ್ನಿಸಿದಾಗ, "ನಾನು ಸರ್ಗೆ ಧನ್ಯವಾದ ಹೇಳಲು ಬಯಸುತ್ತೇನೆ. ಖಂಡಿತವಾಗಿಯೂ ಅವರೊಂದಿಗೆ ಐಸ್ಕ್ರೀಂ ಸವಿಯುವ ಅವಕಾಶ ಸಿಕ್ಕರೆ ಹೋಗುವೆ. ಆದರೆ, ಸದ್ಯದ ಪರಿಸ್ಥಿತಿ, ಬ್ಯುಸಿಯಾದ ವೇಳಾಪಟ್ಟಿಯಿಂದಾಗಿ ಏನಾಗುತ್ತದೆ ಎಂಬುದನ್ನು ಕಾಯ್ದುನೋಡಬೇಕು ಎಂದರು. ಟೋಕಿಯೋ ಒಲಿಂಪಿಕ್ ಕ್ರೀಡಾಕೂಟದಿಂದ ವಾಪಸ್ ಬಂದ ಸಂದರ್ಭದಲ್ಲಿ ಪಿ.ವಿ.ಸಿಂಧು ಪ್ರಧಾನಿ ಮೋದಿ ಜತೆ ಐಸ್ ಕ್ರೀಂ ಸವಿದಿದ್ದರು.