ಈ ಪುಟಾಣಿ ಬಭ್ರುವಾಹನ ಡೈಲಾಗ್‌ಗೆ ಪುನೀತ್ ಫಿದಾ.. ಆಡಿಯೋ ಮೂಲಕ ಪವರ್ಸ್ಟಾರ್ ಮೆಚ್ಚುಗೆ - Akash Bhat of Panja
🎬 Watch Now: Feature Video
ಸುಳ್ಯ(ದಕ್ಷಿಣ ಕನ್ನಡ): ಸಾಮಾಜಿಕ ಜಾಲತಾಣದಲ್ಲಿ ಸುಳ್ಯ ತಾಲೂಕಿನ ಪಂಜದ ಪುಟಾಣಿ ಆಕಾಶ್ ಭಟ್, ಬಭ್ರುವಾಹನ ಸಿನಿಮಾದ ಡೈಲಾಗ್ ಮತ್ತು ಹಾಡನ್ನು ವೀಕ್ಷಿಸಿ ಪ್ರಸಿದ್ದ ನಟ ಪುನೀತ್ ರಾಜ್‌ಕುಮಾರ್ ಅವರು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿ ಆಕಾಶ್‌ಗೆ ಅಭಿನಂದಿಸಿದ್ದಾರೆ. ನಾಲ್ಕು ವರ್ಷದ ಆಕಾಶ್ ಭಟ್ ಪಂಜದ ವೆಂಕಟರಮಣ ಭಟ್ ಅವರ ಮೊಮ್ಮಗ. ಆದಿತ್ಯ ಹಾಗೂ ಪೂನಮ್ ದಂಪತಿ ಪುತ್ರ. ಬೆಂಗಳೂರಿನ ಡೆಲ್ಲಿ ಪಬ್ಲಿಕ್ ಸ್ಕೂಲ್‌ನಲ್ಲಿ ಪ್ರೀಕೆಜಿ ಓದುತ್ತಿರುವ ಈತ ಈ ಹಿಂದೆ ಆಕಾಶ್ ಡೋಲು ಬಾರಿಸುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿ ಮೆಚ್ಚುಗೆ ಗಳಿಸಿತ್ತು.