ಗರ್ಭಿಣಿಯನ್ನು ಡೋಲಿಯಲ್ಲಿ ಕೂರಿಸಿ 4 ಕಿಮೀ ದೂರದ ಆಸ್ಪತ್ರೆಗೆ ಕರೆದೊಯ್ದ ಕುಟುಂಬ! - ಡೋಲಿಯಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ಕುಟುಂಬ
🎬 Watch Now: Feature Video
ಪಾಲ್ಘರ್(ಮಹಾರಾಷ್ಟ್ರ): ಸರಿಯಾದ ರಸ್ತೆ ಇಲ್ಲದ ಕಾರಣ ಗರ್ಭಿಣಿಯನ್ನು ನಾಲ್ಕು ಕಿಲೋ ಮೀಟರ್ವರೆಗೆ ಡೋಲಿಯಲ್ಲಿ ಹೊತ್ತುಕೊಂಡು ಆಸ್ಪತ್ರೆಗೆ ತೆರಳಿದ ಘಟನೆ ಪಾಲ್ಘರ್ ಜಿಲ್ಲೆಯಲ್ಲಿ ನಡೆಯಿತು. ಇಲ್ಲಿನ ಬುಡಕಟ್ಟು ಪ್ರದೇಶವಾದ ಮೊಖಾಡ ತಾಲೂಕಿನ ಮುಕುಂದಪದ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಯಾವುದೇ ರಸ್ತೆ ಇಲ್ಲ. ಅಲ್ಲದೇ ಮೊಖಾಡದಿಂದ ಈ ಗ್ರಾಮ 40 ಕಿ.ಮೀ. ದೂರದಲ್ಲಿದೆ. ಹೀಗಾಗಿ ಕುಟುಂಬವೊಂದು ಗರ್ಭಿಣಿಯನ್ನು ಡೋಲಿಯಲ್ಲಿ ಹೊತ್ತುಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗಿದೆ.