ಶಿವಮೊಗ್ಗದಲ್ಲಿ ಪೆಟ್ರೋಲ್ ಕದಿಯುವ ಗ್ಯಾಂಗ್ ಮತ್ತೆ ಆ್ಯಕ್ಟಿವ್: ಕಳ್ಳರ ಕರಾಮತ್ತು ಸಿಸಿಟಿವಿಯಲ್ಲಿ ಸೆರೆ - Petrol stealing gang is active again in Shimoga
🎬 Watch Now: Feature Video
ಶಿವಮೊಗ್ಗ: ಜಿಲ್ಲೆಯಲ್ಲಿ ರಾತ್ರಿ ವೇಳೆ ಬೈಕ್ನಲ್ಲಿನ ಪೆಟ್ರೋಲ್ ಕದಿಯುವ ಗ್ಯಾಂಗ್ ಮತ್ತೆ ಆ್ಯಕ್ಟಿವ್ ಆಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ನಿನ್ನೆ ರಾತ್ರಿ ವಿನೋಬನಗರದಲ್ಲಿ ಬೈಕ್ಗಳಲ್ಲಿದ್ದ ಪೆಟ್ರೋಲ್ ಕದಿಯಲಾಗಿದೆ. ವಿನೋಬನಗರದ ಡಿವಿಎಸ್ ಶಾಲೆ ಹಿಂಭಾಗದ ರಸ್ತೆಯಲ್ಲಿ ನಿನ್ನೆ ರಾತ್ರಿ ಕಳ್ಳತನವಾಗಿದೆ. ನಿವೃತ್ತ ಯೋಧರಾದ ಹನುಮಂತಪ್ಪ ಅವರು ತಮ್ಮ ಮನೆ ಮುಂದೆ ಬೈಕ್ ನಿಲ್ಲಿಸಿ ಮಲಗಿದ್ದಾರೆ. ಬೆಳಗ್ಗೆ ಎದ್ದು ನೋಡಿದಾಗ ಪೆಟ್ರೋಲ್ ಪೈಪ್ ಕಟ್ ಆಗಿದ್ದು, ಬೈಕ್ನಲ್ಲಿನ ಎಲ್ಲಾ ಪೆಟ್ರೋಲ್ ಖಾಲಿಯಾಗಿದೆ. ಹನುಮಂತಪ್ಪ ಅವರ ಸ್ಪೈಂಡರ್ ಪ್ರೊ, ಇವರ ಮಗನ ಪಲ್ಸರ್ ಹಾಗೂ ಮನೆ ಓನರ್ ರಾಯಲ್ ಎನ್ ಫಿಲ್ಡ್ ಬೈಕ್ ಸೇರಿ ಒಟ್ಟು ಮೂರು ಬೈಕ್ನ ಪೆಟ್ರೋಲ್ ಕದಿಯಲಾಗಿದೆ. ಪೆಟ್ರೋಲ್ ಕದಿಯಲು ಬಂದವರಿಗೆ ಪೈಪ್ ತೆಗೆಯಲು ಆಗದೇ ಹೋದಾಗ ಪೆಟ್ರೋಲ್ ಪೈಪ್ ಕಟ್ ಮಾಡಿದ್ದಾರೆ. ಈ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.