ಜೈಪುರದಲ್ಲಿ ಪೆಟ್ರೋಲ್ ಕೊರತೆ: ತೈಲ ಖರೀದಿಗೆ ಮುಗಿಬಿದ್ದ ಜನ
🎬 Watch Now: Feature Video
ಜೈಪುರ: ರಾಜಧಾನಿ ಜೈಪುರದಲ್ಲಿ ತೈಲ ಬಿಕ್ಕಟ್ಟು ತಲೆದೋರಿದೆ. ಕಳೆದ 3 ದಿನಗಳಿಂದ ಎಚ್‌ಪಿಸಿಎಲ್ (ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್) ಮತ್ತು ಬಿಪಿಸಿಎಲ್ನ ( ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್) ಬಹುತೇಕ ಬಂಕ್ಗಳು ಬಂದ್ ಆಗಿವೆ. ಹೀಗಾಗಿ, ಐಒಸಿಎಲ್‌ನ (ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್) ಪೆಟ್ರೋಲ್ ಬಂಕ್ಗಳಲ್ಲಿ ತೈಲ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ವಿಶೇಷವಾಗಿ, ರಾಮಗಢ ಮೋರ್, ಶಾಸ್ತ್ರಿ ನಗರ, ಝೋತ್ವಾರಾ, ವೈಶಾಲಿ ನಗರ, ಪ್ರತಾಪ್ ನಗರ ಮತ್ತು ವಿದ್ಯಾಧರ್ ನಗರದ ಕೆಲವು ಪ್ರದೇಶಗಳಲ್ಲಿ ಜನರು ಬಂಕ್ಗಳ ಮುಂದೆ ಕ್ಯೂ ನಿಂತಿದ್ದಾರೆ. ಪರಿಣಾಮ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿದ್ದು, ಸ್ಥಳೀಯ ಪೊಲೀಸರು ಬಂಕ್ಗಳಿಗೆ ಭೇಟಿ ನೀಡಿ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಂಡಿದ್ದಾರೆ. ಬೇಡಿಕೆಯಷ್ಟು ಪ್ರಮಾಣದಲ್ಲಿ ಕಂಪನಿಗಳು ಪೆಟ್ರೋಲ್, ಡಿಸೇಲ್ ಪೂರೈಸದಿರುವುದರಿಂದಲೇ ಈ ಸಮಸ್ಯೆ ಉದ್ಭವಿಸಿದೆ. ಪರಿಣಾಮ ತಮ್ಮದಲ್ಲದ ತಪ್ಪಿಗೆ ಬಂಕ್ ಮಾಲೀಕರು ಗ್ರಾಹಕರಿಂದ ಬೈಗುಳ ಕೇಳುವಂತಾಗಿದೆ.