ತುಂಬಿ ಹರಿದ ತುಂಗಭದ್ರಾ.. ನಿಷೇಧಿತ ಪ್ರದೇಶದಲ್ಲಿ ಮಿತಿ ಮೀರಿದ ಜನ - ತುಂಗಭದ್ರಾ ಜಲಾಶಯದ ಒಳಹರಿವು

🎬 Watch Now: Feature Video

thumbnail

By

Published : Aug 7, 2022, 8:09 PM IST

ಒಂದೆಡೆ ತುಂಗಭದ್ರಾ ನದಿನೀರು ಹೆಚ್ಚಳವಾಗಿದ್ದು, ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇನ್ನೊಂದೆಡೆ ಅಪಾಯ ಕಣ್ಣಮುಂದೆ ಕಾಣುತ್ತಿದ್ದರೂ ಅದನ್ನ ಲೆಕ್ಕಿಸದ ಜನ ಅದರತ್ತ ಹೋಗಿ ಆಟವಾಡುತ್ತಿರುವುದು ಕಂಡುಬಂದಿದೆ. ಹೌದು, ಈ ದೃಶ್ಯ ಕಂಡುಬಂದದ್ದು ಕೊಪ್ಪಳದ ಮುನಿರಾಬಾದ್​ನಲ್ಲಿನ ತುಂಗಭದ್ರಾ ಅಣೆಕಟ್ಟಿಗೆ ಅಣತಿ ದೂರದಲ್ಲಿರುವ ಕಿರು ಸೇತುವೆಯಲ್ಲಿ. ಇಂದು ತುಂಗಭದ್ರಾ ಜಲಾಶಯದಲ್ಲಿ ಒಳಹರಿವು 69550 ಕ್ಯೂಸೆಕ್​ ಇದ್ದು, 79599 ಕ್ಯೂಸೆಕ್​ ನೀರನ್ನು ನದಿಗೆ ಹರಿಬಿಡಲಾಗಿದೆ. ಇಂದು ಭಾನುವಾರವಾಗಿರುವ ಹಿನ್ನೆಲೆ ಮಕ್ಕಳು, ವಯಸ್ಕರು, ಮಹಿಳೆಯರು ಹೀಗೆ ಎಲ್ಲಾ ವಯೋಮಾನದವರು ಜಲಾಶಯವನ್ನು ಕಣ್ಣುತುಂಬಿಕೊಳ್ಳಲು ಬಂದಿದ್ದಾರೆ. ಆದರೆ, ನಿಷೇಧಿತ ಪ್ರದೇಶದ ನದಿ ನೀರಲ್ಲಿ ಆಟವಾಡಲು ಮುಂದಾಗಿರುವುದು ಅಪಾಯಕ್ಕೆ ಆಹ್ವಾನ ನೀಡಿದಂತಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.