ವಿಜಯಪುರದಲ್ಲಿ ತುಂಬಿ ಹರಿಯುತ್ತಿರುವ ಕೆರೆ ಕಟ್ಟೆಗಳು.. ಸೆಲ್ಪಿಗಾಗಿ ಯುವಕರ ಹುಚ್ಚಾಟ - ಹುಣಶ್ಯಾಳ ಗ್ರಾಮಸ್ಥರು ಸಂತಸ
🎬 Watch Now: Feature Video

ವಿಜಯಪುರ ಜಿಲ್ಲೆಯಲ್ಲಿ ಉತ್ತಮ ಮಳೆ ಬರುತ್ತಿರುವ ಕಾರಣ ಕೆರೆ ಕಟ್ಟೆಗಳು ಭರ್ತಿಯಾಗಿವೆ. ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಹುಣಶ್ಯಾಳ ಕೆರೆ ಭರ್ತಿಯಾಗಿ ಕೋಡಿ ಹರಿದಿದೆ. ಈ ನಡುವೆ ಯುವಕರು ಎಂಜಾಯ್ ಮಾಡುತ್ತಿದ್ದಾರೆ. ಕೋಡಿ ಹರಿಯುತ್ತಿರುವ ನೀರಿನ ಮೇಲೆ ಡ್ಯಾನ್ಸ್ ಮಾಡುತ್ತಿರುವ ಯುವಕರು ಕೋಡಿ ಬಿದ್ದ ನೀರಲ್ಲಿ ಮಿಂದೇಳುತ್ತಿದ್ದಾರೆ. ಯುವಕರು ಹಾಗೂ ಮಕ್ಕಳು ಧಾರಾಕಾರವಾಗಿ ಹರಿಯುತ್ತಿರುವ ನೀರಿನ ಎದುರುಗಡೆ ಸೆಲ್ಫಿಗೂ ಪೋಸ್ ಕೊಡುತ್ತಿದ್ದಾರೆ. ಬಹಳ ವರ್ಷಗಳ ನಂತರ ತಮ್ಮೂರಿನ ಕೆರೆ ಕೋಡಿ ಕಂಡು ಹುಣಶ್ಯಾಳ ಗ್ರಾಮಸ್ಥರು ಸಂತಸಗೊಂಡಿದ್ದಾರೆ.