ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ.. ನಟ ವಿಜಯ್ ಸಿನಿಮಾ ವೀಕ್ಷಿಸದಂತೆ ಸ್ವಾಮೀಜಿ ಕರೆ - Gnanasambanda Desika Swamigal
🎬 Watch Now: Feature Video
ಮಧುರೈ(ತಮಿಳುನಾಡು): ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಚಿತ್ರಗಳಲ್ಲಿ ನಟ ವಿಜಯ್ ನಟಿಸುತ್ತಿದ್ದು, ಅವರ ಚಿತ್ರಗಳನ್ನ ವೀಕ್ಷಿಸಬೇಡಿ ಎಂದು ಮಧುರೈ ಜ್ಞಾನಸಂಬಂಧ ದೇಶಿಕ ಸ್ವಾಮಿ ಕರೆ ನೀಡಿದ್ದಾರೆ. ತಮಿಳುನಾಡಿನ ಮಧುರೈನಲ್ಲಿ ಮಾತನಾಡಿದ ಅವರು, ದೇವಸ್ಥಾನಗಳಲ್ಲಿ ಏನಾಗುತ್ತಿದೆ ಎಂಬುದು ಖಜಾನೆ ಅಧಿಕಾರಿಗಳಿಗೆ ಗೊತ್ತಾಗುತ್ತಿಲ್ಲ. ದೇವಸ್ಥಾನದ ಆಸ್ತಿ ಕಳೆದುಹೋಗುತ್ತಿದೆ. ಇದರ ಜೊತೆಗೆ ಇತ್ತೀಚಿನ ದಿನಗಳಲ್ಲಿ ಹಿಂದೂ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಹೆಚ್ಚಾಗಿ ನಡೆಯುತ್ತಿದೆ ಎಂದು ಆರೋಪಿಸಿದರು.