ಚಲಿಸುವ ರೈಲಿಂದ ಬೀಳುತ್ತಿದ್ದ ಪ್ರಯಾಣಿಕನ ರಕ್ಷಿಸಿದ ಪೊಲೀಸ್: ವಿಡಿಯೋ - ಈಟಿವಿ ಭಾರತ ಕನ್ನಡ ನ್ಯೂಸ್
🎬 Watch Now: Feature Video
ರೈಲು ಹತ್ತುವಾಗ ಕಾಲು ಜಾರಿ ಬೀಳುತ್ತಿದ್ದ ಪ್ರಯಾಣಿಕನನ್ನು ಪೊಲೀಸ್ ಕಾನ್ಸ್ಟೇಬಲ್ ರಕ್ಷಿಸಿದ ಘಟನೆ ಉತ್ತರಪ್ರದೇಶದಲ್ಲಿ ವರದಿಯಾಗಿದೆ. ಪ್ಲಾಟ್ಫಾರ್ಮ್ ಮೇಲಿದ್ದ ಲಗೇಜ್ ಅನ್ನು ಸಂಗ್ರಹಿಸುವಾಗ ರೈಲು ಚಲಿಸಲು ಆರಂಭಿಸಿದೆ. ಗಡಿಬಿಡಿಯಲ್ಲಿ ಪ್ರಯಾಣಿಕ ರೈಲು ಹತ್ತುತ್ತಿದ್ದಾಗ ಬಾಗಿಲಿನಲ್ಲಿ ಕಾಲು ಜಾರಿ ಜೋತು ಬಿದ್ದಿದ್ದಾನೆ. ಇನ್ನೇನು ಆತ ರೈಲಿನಡಿ ಬೀಳುತ್ತಿರುವಾಗ ಅಲ್ಲಿಯೇ ಇದ್ದ ರೈಲ್ವೆ ಪೊಲೀಸ್ ಓಡಿ ಬಂದು ಪ್ರಯಾಣಿಕನನ್ನು ಹಿಡಿದು ಒಳಗೆ ತಳ್ಳಿದ್ದಾನೆ. ಈ ಸಿನಿಮೀಯ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೊಲೀಸ್ ಕಾನ್ಸ್ಟೇಬಲ್ರ ಚಾಣಾಕ್ಷತೆಗೆ ಮೆಚ್ಚುಗೆ ವ್ಯಕ್ತವಾಗಿದೆ.