ವಿಡಿಯೋ ನೋಡಿ: ಬೆನ್ನಿಗೆ ಮಗು ಕಟ್ಟಿಕೊಂಡು ರಸ್ತೆ ಸ್ವಚ್ಛಗೊಳಿಸುತ್ತಿರುವ ತಾಯಿ - Baripada Municipality
🎬 Watch Now: Feature Video
ಒಡಿಶಾ: ಮಹಿಳೆಯೊಬ್ಬರು ತನ್ನ ಪುಟ್ಟ ಮಗುವನ್ನು ಬೆನ್ನಿಗೆ ಕಟ್ಟಿಕೊಂಡು ರಸ್ತೆ ಸ್ವಚ್ಛಗೊಳಿಸುತ್ತಿದ್ದಾರೆ. ಮಯೂರ್‌ಭಂಜ್ ಜಿಲ್ಲೆಯ ಬರಿಪದ ಪುರಸಭೆಯಲ್ಲಿ ಕಳೆದ 10 ವರ್ಷಗಳಿಂದ ಕಸ ಗುಡಿಸುವ ಕೆಲಸ ಮಾಡುತ್ತಿರುವ ಲಕ್ಷ್ಮಿಮುಖಿ, ಪ್ರತಿದಿನ ಮಗುವನ್ನು ಬೆನ್ನಿಗೆ ಕಟ್ಟಿಕೊಂಡೇ ಕೆಲಸ ಮಾಡುತ್ತಾರೆ. ಮನೆಯಲ್ಲಿ ಮಗುವನ್ನು ನೋಡಿಕೊಳ್ಳಲು ಯಾರು ಇಲ್ಲ, ಒಬ್ಬಳೇ ಇದ್ದೇನೆ. ಮಗುವನ್ನು ನೋಡಿಕೊಳ್ಳುವುದು ಹಾಗೂ ಕಸ ಗುಡಿಸುವುದು ನನ್ನ ಕರ್ತವ್ಯ. ಇದರಿಂದ ನನಗೇನೂ ತೊಂದರೆ ಇಲ್ಲ ಎನ್ನುತ್ತಾರೆ.