ವಿಜಯಪುರದಲ್ಲಿ ನವರಾತ್ರಿ ಸಂಭ್ರಮ.. ಮಿಂಚಿದ ಮಹಿಳಾಮಣಿಗಳು
🎬 Watch Now: Feature Video
ನವರಾತ್ರಿಯೆಂದರೆ ದೇವಿ ಆರಾಧಿಸುವ ಹಿಂದೂ ಧರ್ಮದ ಹಬ್ಬ. ಇದನ್ನು ಕರ್ನಾಟಕದಲ್ಲಿ ದಸರಾ ಎಂದು ಕರೆಯಲಾಗುತ್ತದೆ. ಈ ಹಬ್ಬದಲ್ಲಿ ಒಟ್ಟು ಒಂಬತ್ತು (ನವ) ರಾತ್ರಿಗಳು, ದೇವಿಯ ಒಂಬತ್ತು ವಿಧದ ರೂಪಗಳನ್ನು ಆರಾಧಿಸಲಾಗುತ್ತದೆ. ಹತ್ತನೆಯ ದಿನ 'ವಿಜಯ ದಶಮಿ', ಈ ದಿನ ಶಮಿವೃಕ್ಷಕ್ಕೆ ಪೂಜೆ ಸಲ್ಲಿಸಿ ಶಮಿ (ಬನ್ನಿ)ಯನ್ನು ವಿನಿಯೋಗ ಮಾಡುವುದು ಕರ್ನಾಟಕದ ಆಚರಣೆಯ ಪದ್ಧತಿ. ವಿಜಯಪುರ ಜಿಲ್ಲೆಯಲ್ಲಿಯೂ ಕೂಡಾ ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದಾರೆ. ಅದರಲ್ಲೂ ಮಹಿಳೆಯರು ನಸುಕಿನ ಜಾವವೇ ಎದ್ದು ದೇವಿ ಮಂದಿರಗಳಿಗೆ ತೆರಳಿ ಶ್ರದ್ಧಾ ಭಕ್ತಿಯಿಂದ ಪೂಜಿಸುತ್ತಿದ್ದಾರೆ. ಮುತ್ತೈದೆಯರು ಕೈಯಲ್ಲಿ ಆರತಿ ಹಿಡಿದು ಭಕ್ತಿಯಿಂದ ಆರಾಧಿಸುತ್ತಿದ್ದು, ಕೆಲ ಮನೆಗಳಲ್ಲಿ ದೀಪ ಹಚ್ಚಲಾಗಿದೆ. ಒಂಬತ್ತು ದಿನಗಳ ಕಾಲ ಒಂಬತ್ತು ಬಣ್ಣದ ಸೀರೆ ತೊಟ್ಟು ಮಹಿಳೆಯರು ಸಂಭ್ರಮಿಸುತ್ತಿದ್ದಾರೆ.