ಡ್ರೋನ್ ಕ್ಯಾಮರಾದಲ್ಲಿ ಸೆರೆಯಾದ ಸಹಸ್ತ್ರಕುಂಡ್ ಜಲಪಾತದ ಮನ ಮೋಹಕ ದೃಶ್ಯ
![ETV Thumbnail thumbnail](https://etvbharatimages.akamaized.net/etvbharat/prod-images/320-214-15837716-thumbnail-3x2-lek.jpg)
ಮಹಾರಾಷ್ಟ್ರ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಾಂದೇಡ್ ಜಿಲ್ಲೆಯ ಸಹಸ್ತ್ರಕುಂಡ್ ಜಲಪಾತ ಭೋರ್ಗರೆಯುತ್ತಿದೆ. ಭಾರಿ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು, ಹಡಗಾಂವ, ಹಿಮಾಯತನಗರ ಮತ್ತು ಕಿನ್ವಾಟ್ ತಾಲೂಕಿನ ಹಲವು ರಸ್ತೆಗಳು ಮುಳುಗಿ ಹೋಗಿವೆ. ಈ ಮೂರು ತಾಲೂಕಿನ ಕೆಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಡ್ರೋನ್ ಕ್ಯಾಮರಾದಲ್ಲಿ ಸೆರೆಯಾದ ಸಹಸ್ತ್ರಕುಂಡ್ ಜಲಪಾತದ ಮನ ಮೋಹಕ ದೃಶ್ಯ ಇಲ್ಲಿದೆ ನೋಡಿ.