ಮನೆ ಬಿಟ್ಟು ಹೋಗ್ತಾನೆ ಎಂಬ ಕಾರಣಕ್ಕೆ ಅಳಿಯನಿಗೆ ಚಪ್ಪಲಿಯಿಂದ ಹೊಡೆದ ಮಾವ! - ನಾಗೌರ್ ರಾಜಸ್ಥಾನ

🎬 Watch Now: Feature Video

thumbnail

By

Published : May 25, 2022, 9:51 PM IST

ನಾಗೌರ್ (ರಾಜಸ್ಥಾನ): ದೇಗಾಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಳಿಯನಿಗೆ ಮಾವ ಪಾದರಕ್ಷೆಯಿಂದ ಥಳಿಸಿದ್ದಲ್ಲದೇ ಅದೇ ಚಪ್ಪಲಿಯ ಹಾರ ಹಾಕಿದ ಪ್ರಕರಣ ರಾಜಸ್ಥಾನದಲ್ಲಿ ಬೆಳಕಿಗೆ ಬಂದಿದೆ. ಪತ್ನಿಯ್ನನು ಬಿಟ್ಟು ಆಗಾಗ ಓಡಿ ಹೋಗುತ್ತಿದ್ದ ಎಂಬ ಕಾರಣಕ್ಕೆ ಈ ರೀತಿ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಸುಮಾರು 8 ರಿಂದ 10 ದಿನಗಳ ಹಿಂದಿನ ವಿಡಿಯೋ ಇದಾಗಿದ್ದು, ಈಗ ವೈರಲ್​ ಆಗುತ್ತಿದೆ. ಈ ಘಟನೆಯ ಕುರಿತು ಸಂತ್ರಸ್ತ ಅಳಿಯ ಮತ್ತು ಆತನ ತಂದೆ ದೇಗಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.