ನಾಗರಪಂಚಮಿ ಹಬ್ಬದಾಚರಣೆ: ಹುತ್ತಕ್ಕೆ ಹಾಲೆರೆದ ನಾರಿಯರು - kannadanews
🎬 Watch Now: Feature Video
ನಾಗರಪಂಚಮಿ ಹಬ್ಬದ ಅಂಗವಾಗಿ ನಗರದ ಮಹಾರಾಜ ಪಾರ್ಕಿನಲ್ಲಿರುವ ಹಾವಿನ ಹುತ್ತಕ್ಕೆ ಮಹಿಳೆಯರು ಮತ್ತು ಪುರುಷರು ಹಾಲೆರೆದು ವಿಶೇಷ ಪೂಜೆ ಸಲ್ಲಿಸಿದರು. ಬೆಳಗಿನಿಂದ ಸಂಜೆವರೆಗೂ ಉಪವಾಸವಿದ್ದು, ನಂತರ ಪೂಜೆ ಸಲ್ಲಿಸಿ ಪ್ರಸಾದ ಸೇವಿಸಿದರು. ಕಳೆದ ಹಲವು ವರ್ಷಗಳಿಂದ ಇಲ್ಲಿನ ಮಹಿಳೆಯರು ಈ ರೀತಿ ಹಬ್ಬ ಆಚರಿಸಿಕೊಂಡು ಬರುತ್ತಿದ್ದಾರೆ. ಹೀಗೆ ಮಾಡುವುದರಿಂದ ಕುಟುಂಬಕ್ಕೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ.