ವಿಜಯ ದಶಮಿ ಸಂಭ್ರಮ: ಐಷಾರಾಮಿ ಕಾರುಗಳಿಗೆ ಆಯುಧ ಪೂಜೆ ಮಾಡಿದ ಎಂಟಿಬಿ ನಾಗರಾಜ್ - ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್
🎬 Watch Now: Feature Video
ಮಹದೇವಪುರ(ಬೆಂಗಳೂರು): ನಾಡಹಬ್ಬ ದಸರಾ ಹಿನ್ನೆಲೆ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಮನೆಯಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಮಹದೇವಪುರ ಬಳಿ ಇರುವ ಗರುಡಾಚಾರ್ಯ ಪಾಳ್ಯದ ನಿವಾಸದಲ್ಲಿ ಫೆರಾರಿ, ರೋಲ್ಸ್ ರಾಯ್ಸ್, ರೇಂಜ್ ರೋವರ್, ಆಡಿ ಸೇರಿದಂತೆ ಹಲವು ಐಷಾರಾಮಿ ಕಾರುಗಳಿಗೆ ಕುಟುಂಬ ಸಮೇತ ಸೇರಿ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಸಚಿವರು, ಕಳೆದ ಎರೆಡು ವರ್ಷಗಳಿಂದ ಕೋವಿಡ್ ಕಾರಣದಿಂದಾಗಿ ಸರಳ ರೀತಿಯಲ್ಲಿ ದಸರಾ ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ರಾಜ್ಯದಲ್ಲಿ ದಸರಾ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ನಮ್ಮ ಸರ್ಕಾರ ಮೈಸೂರಿನಲ್ಲಿ ನೂರಾರು ವರ್ಷಗಳಿಂದ ರಾಜ ಮಹಾರಾಜರು ಆಚರಿಸಿಕೊಂಡು ಬರುತ್ತಿರುವ ವಿಜಯ ದಶಮಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ತಾಯಿ ಚಾಮುಂಡೇಶ್ವರಿ ನಾಡಿನ ಎಲ್ಲಾ ಜನತೆಗೆ ಒಳ್ಳೆಯದನ್ನು ಮಾಡಲಿ ಎಂದು ಆಶಿಸಿದರು.